Thursday, 2 December 2021

ದಯವ ಮಾಡೋ ಎನ್ನ ಭಯವ ಬಿಡಿಸೋ ankita ramadasa.a DAYAVA MAADO ENNA BHAYAVA BIDISO



 ಅಸೂರಿ ರಾಮಸ್ವಾಮಿ ಅಯ್ಯಂಗಾರ್ ankita ramadasa 


ದಯವ ಮಾಡೋ ಎನ್ನ ಭಯವ ಬಿಡಿಸೋ ಪ 


ಅಭಯ ಪ್ರದಾಯಕ ರಥಾಂಗ ಮಾವಿನಕೆರೆರಂಗಾ ಅ.ಪ 


ಮುನಿವರರೆಲ್ಲ ನಿನ್ನ ಅನುದಿನ ಭಜಿಪರೋ ತನು ಮನ ಧನಗಳ ನಿನಗೊಪ್ಪಿಸಲು ಘನ ತಪೋಶಕ್ತಿಯಿಂದ ಮನವೊಲಿಸುವರು ನಿನ್ನಾ ಅನಿತನರಿಯದೆನ್ನೊಳು ಸನುಮತದಿಂದಲಿಯೆನ್ನೊಳು 1 

ಕಾಮ ಕ್ರೋಧಂಗಳಿಂ ಭ್ರಾಮಕನಾದೆನ್ನ ನೇಮವೊಂದಿಲ್ಲ ನಿನ್ನ ನಾಮಂಗಳುಲಿಯೆ ನಾ ಭೂಮಿಯೊಳನೇಕ ಜನ್ಮನಾಮದಿಂದೆ ಜನಿಸಿ ಪಾಪ ಕರ್ಮವ ತಳೆದೆಂ ರಾಮದಾಸಾರ್ಚಿತನೆ ಯೆನ್ನೊಳು 2 

ಕರಿಯ ಪೊರೆದೆ ಹರೀ ತರಳಗೊಲಿದೇ ಶೌರಿ ದುರುಳನ ಪೊರೆದೆ ಉದಾರಿ ಸರಸಿಜಾಕ್ಷ ಮುರಾರಿ ಸುರಪತೆ ರಕ್ಕಸಾರಿ ಕರುಣಿಸೋ ಸೂತ್ರಧಾರಿ ಕರವಪಿಡಿದು ಯೆನ್ನೊಳು 3

***


No comments:

Post a Comment