Showing posts with label ಭ್ರಮೆುಂದಲಿದೆ ಲೋಕವೆಲ್ಲ ನಿನ್ನಭ್ರಮೆ ತೀರಲು gopalarya. Show all posts
Showing posts with label ಭ್ರಮೆುಂದಲಿದೆ ಲೋಕವೆಲ್ಲ ನಿನ್ನಭ್ರಮೆ ತೀರಲು gopalarya. Show all posts

Thursday, 5 August 2021

ಭ್ರಮೆುಂದಲಿದೆ ಲೋಕವೆಲ್ಲ ನಿನ್ನಭ್ರಮೆ ತೀರಲು ankita gopalarya

 by gopalaryaru

ಭ್ರಮೆುಂದಲಿದೆ ಲೋಕವೆಲ್ಲ ನಿನ್ನಭ್ರಮೆ ತೀರಲು ಲೋಕವೆಳ್ಳನಿತಿಲ್ಲ ಪ

ನೀ ನಿನ್ನ ತಿಳಿದರೆ ಸಾಕು ುೀಸೂನೀಯ ಭೋಗಂಗಳಿನ್ನೇನು ಬೇಕುನೀ ನಿನ್ನ ಮರೆವುದೆ ಕಾಕು ನೀಮೀನ ಮೇಷಂಗಳನೆಣಿಸದೆ ನೂಕು 1

ಸಾಕು ಮಂದನಾಗಬೇಡ ನಿನಗೆಬೇಕಾದ ಸುಖವಿದೆ ನಿನ್ನೊಳು ನೋಡಶೋಕ ಮೋಹಗಳನೀಡಾಡ ನಿನ್ನನೀ ಕಂಡು ನಿಜ ಸುಧೆಯೊಳಗೋಲಾಡ2

ನಿನ್ನೊಳು ನಿಜ ಸುಖವುಂಟು ನೀನನ್ಯವನಳಿದು ನೋಡಲು ಕೈಗಂಟು ಭಿನ್ನ ಬುದ್ಧಿಯನೆಲ್ಲದಾಂಟುಸನ್ನುತಾನಂದಾಮೃತವನೊಲಿದೀಂಟು 3

ಗುರುವಿನ ಕೃಪೆುಲ್ಲದಿಲ್ಲಾ ಮುಕ್ತಿಕರೆದರೆ ಬರುವರೆ ಕಾಮಿನಿಯಲ್ಲಪರಮ ಧೈರ್ಯವ ಮಾಡುವನಲ್ಲ ನಿನ್ನಮರೆಯದೆ ನೋಡು ನಾನೆಂದಿದನೆಲ್ಲಾ 4

ಈ ಪಾಳು ಕರ್ಮದಲೇನು ಈಗನಾ ಪೇಳಿದೆ ಕಂಡುದ ಮಾಡು ಮಾಣುಕೋಪವ ಬಿಡು ಸುಖಿ ನೀನು ಸದ್ಯಗೋಪಾಲಾರ್ಯರ ಕಂಡೆ ಇನ್ನೇನೂ 5

****