Audio by Mrs. Nandini Sripad
ಹರಪನಹಳ್ಳಿ ಶ್ರೀ ರಾಮಾಚಾರ್ಯ ದಾಸರ ಕೃತಿ
( ಇಂದಿರೇಶ ಅಂಕಿತ )
ರಾಗ ಭೂಪಾಳಿ ಖಂಡಛಾಪುತಾಳ
ಚಂದಿರ ಉದಯವಾಯಿತೇ ಕೃಷ್ಣಾರ್ಯರೆಂಬೋ ॥ ಪ ॥
ಚಂದಿರನುದಿಸಿದ ತನ್ನಯ
ಸುಂದರಿ ಸೂರಿಗಳ ಸುಕೃತ ।
ಬಿಂದ್ಯವೆಂಬೋ ಉದಯಾಚಲದ
ಕಂದರದಿಂ ಕುಣಿದು ಬಂದು ॥ ಅ ಪ ॥
ಮಂಗಳಾಂಗ ಮನುಜರ ದುರಿ -
ತಂಗಳೊಳು ಗಾಢ ತಿಮಿರ ।
ಭಂಗಗೈದು ಸುಜನರ ಬೆಳ -
ದಿಂಗಳು ಸೂರಾಡುವಂಥ ॥ 1 ॥
ರಾಜಿಸುವನು ಕುಜನರ ಮುಖಾಂ -
ಬುಜಗಳನೆ ಬಳಲಿ ಸೋಮ ।
ತೇಜ ಸುಜನರೆಂಬೋ ಕುಮುದ -
ರಾಜಿಗಳ ವಿಕಾಸಗೈವ ॥ 2 ॥
ಇಂದಿರೇಶನೆ ಪರದೈವ -
ವೆಂದು ಜಗಕೆ ಸಾರುತಿರಲು , ಆ - ।
ನಂದತೀರ್ಥರ ಮತವೆಂಬೋ
ಸಿಂಧುರಾಜ ವರ್ಧಿಸಿದನ ॥ 3 ॥
******