Showing posts with label ಬಾರೋ ಬಾರೋ ಕೃಷ್ಣಬಾರೊ ramesha. Show all posts
Showing posts with label ಬಾರೋ ಬಾರೋ ಕೃಷ್ಣಬಾರೊ ramesha. Show all posts

Thursday, 14 November 2019

ಬಾರೋ ಬಾರೋ ಕೃಷ್ಣಬಾರೊ ankita ramaesha

by ಗಲಗಲಿಅವ್ವನವರು
ಬಾರೊ ಬಾರೊ ಕೃಷ್ಣಬಾರೊ ಬಾರಯ್ಯಚಾರುನವರತ್ನದ ಹಸೆಯ ಏರು ಬಾರಯ್ಯ ಪ.

ನಾರುವ ಮೈಯವನೆ ನೀರು ಬಿಟ್ಟು ಬಾರಯ್ಯಭಾರಹೊರೆಸೋದಿಲ್ಲ ಹಸೆಯ ಏರು ಬಾರಯ್ಯಕ್ವಾರಿ ಮಸೆದು ಕೋಪಿಸಬ್ಯಾಡದಾರಿಗಾಲ ಪರಿಯಬ್ಯಾಡಭಾರಕೊಡಲಿ ಧರಿಸಿ ನೀನು ಭೋರಾಡ ಬ್ಯಾಡ1

ಮಡದಿಯ ಹಂಬಲದಿ ಅಡವಿ ಹಿಡಿಯ ಬ್ಯಾಡಯ್ಯತುಡುಗತನದಿ ಹಾಲು ಮೊಸರು ಕುಡಿಯ ಬ್ಯಾಡಯ್ಯಒಡವೆ ವಸ್ತ್ರ ಕಾಣೆ ನಿನಗೆ ಹಿಡಿದೇಜಿಎಲ್ಲವೂ ಕೃಷ್ಣಬಡಿವಾರಸಾಕೊನಿನ್ನ ಸಡಗರ ರಂಗಯ್ಯ 2

ಅರ್ಥಿಲೆ ಪುರುಷ ರಾಮೇಶ ಮತ್ತೆ ಬಾರಯ್ಯಜಾರವೃತ್ತಿಗಳ ಜರೆದು ಹಸೆಯ ಹತ್ತ ಬಾರಯ್ಯಮಿತ್ರಿ ರುಕ್ಮಿಣಿ ಸತ್ಯಭಾವೆಯರುಮತ್ತೆ ಉಳಿದ ನಾರಿಯರು ಅತ್ಯಂತ ಶೋಭಿಸುತಲೆಮುತ್ತಿನ ಹಸೆಯ ಏರು ಬಾರಯ್ಯ ಕೃಷ್ಣ ಬಾರೊ ಬಾರೊ 3
*******