Showing posts with label ನಂದನ ಕಂದನ ಇಂದುವದನನ purandara vittala. Show all posts
Showing posts with label ನಂದನ ಕಂದನ ಇಂದುವದನನ purandara vittala. Show all posts

Thursday, 5 December 2019

ನಂದನ ಕಂದನ ಇಂದುವದನನ purandara vittala

ರಾಗ ಕಾಪಿ ಅಟತಾಳ 

ನಂದನ ಕಂದನ ಇಂದುವದನನ
ಎಂದು ಬಿಗಿದಪ್ಪಿ ಮುದ್ದಿಡುವೆ ನಾ ||ಪ ||

ಉಂಗುರ ಕೇಶಗಳು ಶಿರದ ಮೇಲ್ಕಟ್ಟು
ರಂಗಯ್ಯನ ಫಣೆಯಲಿ ಕಸ್ತೂರಿ ಬೊಟ್ಟು ||ಅ ||

ಝಳಝಳಿರೆನ್ನುತ ಕರ್ಣ ಕುಂಡಲವು
ಥಳಥಳಿಸುವ ದಿವ್ಯ ಪಚ್ಚೆ ಪದಕವು ||

ಆಜಾನುಬಾಹು ಅಜನ ಪೆತ್ತ ನಾಭಿ
ವಿಜಯಗೆ ಸಾರಥ್ಯ ಮಾಡಿದ ಕೈ ||

ಚಿನ್ನದ ಕಾಪು ಕೈಲಿ ಒಪ್ಪುವದು
ಸಣ್ಣ ರಂಗನ ಕರದಿ ಬುಗುರಿ ಇರುವುದು ||

ಪಟ್ಟೆ ಪೀತಾಂಬರ ಉಡಿಯಲಿ ಪೊಳೆಯೆ
ಕಟ್ಟಿದ ತೋಳಬಂದಿ ಕೊರಳೊಳು ಸರಿಗೆ ||

ಮುತ್ತಿನ ಹಾರ ಶ್ರೀ ತುಳಸೀಸರ
ಮತ್ತೆ ನಲಿದಾಡುವ ಅತಿ ವಿಚಿತ್ರ ||

ಭಂಗಾರ ಕಾಲ್ಸರ ಅಂಗಾಲು ಬಣ್ಣ
ಮಂಗಳವಿಗ್ರಹಕೆ ಮಣಿವ ಮುಕ್ಕಣ್ಣ ||

ಕರುಣಾಸಾಗರನು ಏನೆಂಬೆ ನಾನು
ಅರಮನೆಯಲಿ ಆಡುವ ಸಣ್ಣ ಕೃಷ್ಣಯ್ಯನು ||

ಸಾರು ಅನ್ನಕ್ಕೆ ನೀಡಿದ ಕೈಯಿ
ನೀರುಮಜ್ಜಿಗೆ ಉಂಡ ಪವಳದ ಬಾಯಿ ||

ಮಲಗಿದ ಮಂಚದ ಮೇಲೋಡಿ ಬಂದು
ಮಲಗಿ ನಿದ್ರೆಗೆಯ್ದ ಬೆರಳನೆ ಸವಿದು ||

ಎಂದು ಇರುವವನು ನಂಬಿದರೆ ಬಿಡನು
ತಂದೆ ಪುರಂದರವಿಠಲರಾಯನು ||
***

pallavi

nandana kandana indu vadanana endu bigidappi muddiDuve nA

caraNam 1

ungura kEshagaLu shirada mElkaTTu rangayyana phaNeyali kastUri boTTU

caraNam 2

jhaLa jhaLirennuta karNa kuNDalavu thaLa thaLisuva divya pacce padakavu

caraNam 3

AjAnubAhu ajana petta nAbhi vijayage sArathya mADida kai

caraNam 4

cinnada kApu kaili oppuvadu saNNa rangana karadi buguri iruvudu

caraNam 5

paTTe pItAmbara uDiyali poLeya kaTTida tOLabandi koraLoLu sarige

caraNam 6

muttina hAra shrI tuLasI sara matte nalidADuva ati vicitra

caraNam 7

bhangAra kAlsara angAlu baNNa mangaLa vigrahake maNiva mukkaNNa

caraNam 8

karuNA sAgaranu Enembe nAnu aramaneyali Aduva saNNa krSNayyanu

caraNam 9

sAru annakke nIDida kaiyi nIru majjige uNDa pavaLada bAyi

caraNam 10

malagida mancada mELODi bandu malagi nidre geida beraLaLa savidu

caraNam 11

endu iruvavanu nambidare biDanu tande purandara viTTalarAyanu
***