..
kruti by ವರದೇಶ ವಿಠಲರು varadesha vittala dasaru
ಶ್ರೀ ಪತಿಯೆ ನಿನ್ನ ದಯವೆಂತಾಹದೋ
ಪಾಪಕರ್ಮವ ಮಾಡಿ ಜೀವಿಸುವೆ ನಿರುತ ಪ
ಬಾಲತನವನು ಬಾಲಲೀಲೆಯಿಂದಲಿ ಕಳೆದೆ
ಕೀಳು ಜನರೊಡನೆ ಸ್ನೇಹವ ಬೆರಸಿದೆ
ಹಾಳು ಹರಟೆಗೆ ಹೊತ್ತು ಸಾಲದೋಯಿತು ಯನಗೆ
ಶ್ರೀ ಲೋಲ ನಿನ್ನಡಿಗೆ ದೂರಾದೆ ನಾನು 1
ಬುದ್ಧಿ ಪೂರ್ವಕದಿ ಸದ್ವಿದ್ಯೆಯನು ಕಲಿಯದಲೆ
ಶುದ್ಧ ತಾಮಸ ವಿದ್ಯದೊಳು ರಮಿಸಿದೆ
ಮಧ್ವಶಾಸ್ತ್ರದಸಾರವನ್ನು ತಿಳಿಯದೆ ನಾನು
ಕದ್ದಕಳ್ಳನ ತೆರದಿ ಬಾಳಿದೆನು ಬರಿದೆ 2
ಪ್ರಾಯತನವೆ ವಿಷ ಪ್ರಾಯವಾಯಿತು ಎನಗೆ
ಕಾಯಜನ ಉಪಟಳದಿ ಮತ್ತನಾದೆ
ತೋಯಜಾಕ್ಷಿಯರ ದುರ್ಮಾಯ ಜಾಲಕೆ ಸಿಲುಕಿ
ನೋಯಿಸಿದೆ ನಿಜ ಸತಿಯ ಪರಿಪರಿಯಲಿಂದ 3
ಮದನ ಜನಕನೆ ನಿನ್ನ ಮಧುರನಾಮವ ಮರೆದು
ಸುದತಿಯರ ಅಧರಾಮೃತಕೆ ಬೆರೆದು
ವಿಧಿಕುಲಾಚರಣೆ ಜರೆದ್ಹÀÀಗಲಿರುಳು ನಾರಿಯರ
ವದನವನು ನೋಡಿ ಮೋದಿಪನರಾಧಮನೊಳ್ 4
ಉದರ ಗೋಸುಗ ಪರರ ಹೃದಯ ದ್ರವಿಸುವ ತೆರದಿ
ವಿಧ - ವಿಧದಿ, ಆತ್ಮ ಸ್ತೊತ್ರವನೆ ಪೊಗಳಿ
ಸದ-ಸದ್ವಿ ವೇಕವನು ತೊರೆದನ್ಯರ್ಹಳಿದು ಬಲು
ಚದುರ ನಾನೆಂಧೇಳಿ ಮೋಸಗೊಳಿಸುತ ಜನರ 5
ಕರಿವರದ ನಿನ್ನ ಸಿರಿ ಚರಣಕ್ಕೆ ಶಿರ ಬಾಗ
ದ್ಹರಿ ಭಕುತರಿಗೆ ವಿನಯದಿಂದೆರಗದೆ
ನಿರುತದಲಿ ನಾಚಿಕಿಲ್ಲದಲೆ ಭೂದನುಜಯ ವಾನರಿಗೆ
ಕರಮುಗಿದು ಜೀವಿಪÀಖೂಳ ಮನುಜನೊಳು 6
ಸತ್ಯಧರ್ಮವÀ ತ್ಯಜಿಸಿ ಮತ್ತೆಯುತ್ತಮರಜಾ -
ನ್ನತ್ಯವನು ಸಹಿಸದಲೆ ತತ್ತಳಿಸುವೆ
ಪೆತ್ತವರ ಸೇವಿಸದೇ ಮಿಥ್ಯವನೆ ಬೊಗಳಿದು -
ಷ್ಕøತ್ಯದಿಂಬಾಳ್ವ ಉನ್ಮತ್ತನರ ಪಶುವಿನೊಳು 7
ಹರಿಗೆರಗದಿರುವÀÀ ಶಿರ ಹರಿಯ ಸ್ಮರಿಸದ ಜಿಂಹೆ
ಹರಿವಾರ್ತೆಯಾಲಿಸದ ಕರ್ಣಂಗಳು
ಹರಿಯ ಪೂಜಿಸದ ಕರ ಹರಿಯ ನೋಡದ ಚಕ್ಷು
ಸರುವ ಪರಿಯ ಪವಿತ್ರದೇಹಧರಿಸಿದ ನರಗೆ 8
ಪರರ ಹಿಂಸೆಯಗೈಸಿ ಪರರ ವಿತ್ತ ಪಹರಿಸಿ
ಪರರ ನಿಂದಿಸಿ ಪರರ ಬಲುವಂಚಿಸಿ
ಪರಮೇಷ್ಟಿ ಜನಕನೆ ಪರತರ ಪರಂಜ್ಯೋತಿ
ಪರದೈವನೆಂದರಿಯದಿರುವ ಪಾಮರನಿಗೆ 9
ನಾಮಾಡದಿಹ ಪಾಪ ವೀಮಹಿಯೊಳೊಂದಿಲ್ಲ
ಸೀಮೆಗಾಣಲು ರವಿಜನಿಗೆ ಸಾಧ್ಯವಿಲ್ಲ
ಆ ಮಹಾನರಕÀಂಗಳೆನಗೆÀ ತಕ್ಕವು ಅಲ್ಲ
ಸ್ವಾಮಿ ನೀಪೊರೆಯದಿರೆ ಯನಗಾರು ಗತಿಯಿಲ್ಲ 10
ಏನಾದರೊಳಿತೆ ವರದೇಶ ವಿಠಲ ನಿನ್ನಾ
ಜ್ಞಾನುಸಾರದಿ ಕರ್ಮಗಳ ಮಾಡಿದೆ
ಧೀನರಕ್ಷಕನೆಂಬ ಬಿರಿದು ನಿಜ ವಿದ್ದರಾ -
ದೀನನಾದವನನುದ್ಧರಿಸಲರಿಯಾ 11
***