Showing posts with label ನಂಬಿದೆ ನಮ್ಮಮ್ಮನ ನಂಬಿದೆ indiresha. Show all posts
Showing posts with label ನಂಬಿದೆ ನಮ್ಮಮ್ಮನ ನಂಬಿದೆ indiresha. Show all posts

Monday, 2 August 2021

ನಂಬಿದೆ ನಮ್ಮಮ್ಮನ ನಂಬಿದೆ ankita indiresha

ನಂಬಿದೆ ನಮ್ಮಮ್ಮನ ನಂಬಿದೆ ಪ

ನಂಬಿದೆ ನಮ್ಮಮ್ಮನಂಬುಜಾಸನ ವಾಯುಶಂಭು ಮುಖಮರ ಕದಂಬ ಕರರ್ಚಳ ನಂಬಿದೆ ಅ.ಪ.

ಕರವೀರದೊಳಗಿರುತಿಹಳು ರವಿ ಕಿರಣ ಕಾಂಚನ ಪೀಠ ನಿಧಿತಳು ಸುರತರುಣಿ ಸಂಘಾತ ಸೇವಿತಳು ಆಹಾಹರಿಯ ವಕ್ಷದಿ ಕೂತು ಕರುಣ ಕಟಾಕ್ಷದಿಪರಿವಾರ ಜನಕೆಲ್ಲ ಸುರಿವಳು ಸುಖವನ್ನು 1

ಕರದಿ ಕಂಕಣ ತೋಡೆ ಬಳೆಯು ನಾಗಮುರಿಗೆ ವಂಕಿಯುಶೋಭ ಸಿರಿಯು ಪಾದಾಭರಣದ ಕಲಕಲಧ್ವನಿಯು ಆಹಾಕರಣದಿ ವಾಲಿ ಕಂಠದಿ ಸರ ಸುರಗಿಯುಭರಮ ಮೇಖಳ ಕಾಂತಿ ಹರವಿಲಿ ಬೆಳಗೋದು 2

ಮುಖವನೋಡಲು ಸೋಮಬಿಂಬ ದಿವ್ಯ ಚಿಕುರಮ ಭ್ರಮರದಂಬನಾಸ ಮುಖದಿ ಮಣಿಯು ರವಿಬಿಂಬ ಆಹಾವಿಕಸಿತ ಸುಮಮಾಲೆ ವಿಕಸರ ಫಣಿವೇಣಿಚಕಚಕಿತಾಭರಣಳಕಳಂಕ ಚಲಿವಿಯ 3

ನವನಿಧಿನಾಥನ ಮಗಳು ಸರ್ವಭುವನಾಧಿಪತಿಯ ಸುಪ್ರಿಯಳು ಅನು-ಪವನ ಮುಖಾಮರ ಸ್ವಭವನದಾಯಕಳಾತ್ಮ ಕವನ ಮಾಡುವ ಕವಿ ಭುವನದೊಳಿರುವಳ 4

ದೇಶಕಾಲಗಳಿಂದಸಮಳು ಹರಿಗಾಸುಗುಣಗಳಿಂದಾಸಮಳುಸುಖರಾಶಿ ಸೌಂದರ್ಯ ಸೌಭಗಳು ಆಹಾವಾಸುದೇವನ ಭಕ್ತಿರಾಶೆ ಪೂರೈಸುತಿಂದಿ-ರೇಶನು ಚ್ಛಾಂಗದಿ ತಾ ಸುಖಿಸುವಳಂಬ 5

****