Showing posts with label ಶೇಷಾಂಶ ಪ್ರಹ್ಲಾದರಾಯಾ ಎನ್ನ ದೋಷ gurujagannatha vittala SHESHAAMSHA PRAHLAADARAAYA ENNA DOSHA. Show all posts
Showing posts with label ಶೇಷಾಂಶ ಪ್ರಹ್ಲಾದರಾಯಾ ಎನ್ನ ದೋಷ gurujagannatha vittala SHESHAAMSHA PRAHLAADARAAYA ENNA DOSHA. Show all posts

Thursday, 2 December 2021

ಶೇಷಾಂಶ ಪ್ರಹ್ಲಾದರಾಯಾ ಎನ್ನ ದೋಷ ankita gurujagannatha vittala SHESHAAMSHA PRAHLAADARAAYA ENNA DOSHA



ಶೇಷಾಂಶ ಪ್ರಹ್ಲಾದರಾಯಾ ಎನ್ನ

ದೋಷ ಎಣಿಸದೆ ಕಾಯೊ ಜೀಯಾ ಪ


ಕಂಡ ಕಂಡವರ ಭಜಿಸೀ -ಬೇಡಿ

ಬೆಂಡಾದೆ ನಿನ್ನಂಘ್ರಿ ತ್ಯಜಿಸೀ

ತೋಂಡವತ್ಸಲ ಕರುಣೆ ಸಲಿಸೀ ಪಾದ

ಪುಂಡರೀಕ್ಯನ್ನೊಳಗೆ ಇರಿಸಿಕಾಯೋ 1


ಮಾqಬಾರದ ಕೃತ್ಯವಾ - ನಾ ಬಲು

ಮಾಡಿದೆ ಗೃಹ ಕೃತ್ಯವಾ

ಬೇಡದಕಿ ಭೃತ್ಯತ್ವವಾ - ಈ ದೋಷ

ನೋಡದಲೆ ಭಕ್ತತ್ವವಾ ನೀಡೊ 2


ದೀನ ಜನಪಾಲ ನಿನ್ನಾ - ರೂಪ

ಧೇನಿಸದೆ ಮಾನಿನಿಯರನ್ನಾ

ಧ್ಯಾನ ಮಾಡಿದೆ ಬಿಡದೆ ಘನ್ನಾ - ಗತಿ

ಎನು ಪೇಳಯ್ಯಾ ಎನಗೆ ಮುನ್ನಾ ಸ್ವಾಮಿ 3


ಗುರುರಾಘವೇಂದ್ರರಾಯ - ಎನ್ನ

ಕರದು ಕೈಪಿಡಿಯೊ ಮಹರಾಯ

ತರಿಯೊ ಪಾತಕವೆನ್ನ ಜೀಯಾ

ಶರಣು ಪೊಕ್ಕೆನೊ ನಿನಗೆ ನಾನಯ್ಯಾ ಕರುಣೀ 4


ಮಾತ ಪಿತ ಭ್ರಾತ್ರÀ ಬಂಧೂ - ಎನಗೆ

ನೀತಗತಿಕುಲ ಗೋತ್ರವೆಂದೂ

ದಾತ ನಿನ್ನ ದೂತನೆಂದೂ - ಬಂದ -

ನಾಥನನು ನೀ ಕಾಯುವುದು ಪ್ರಭುವೇ 5


ಕರುಣಸಾಗರನೆ ಈಗ - ತವರೂಪ

ಸ್ಮರಣೆ ನೀಡೆನಗೆ ಬ್ಯಾಗಾ

ಶರಣು ಪೊಕ್ಕವನ ವೇಗಾ - ಭವ -

ಅರಣ ದಾಟಿಸುವಂಥ ಯೋಗಾ ಪೇಳಿ 6


ಹೋಗುತಿದೆ ಹೊತ್ತು ಪದುಮಾಕ್ಷ -ಹ್ಯಾಗೆ

ಆಗುವದೊ ನಿನ್ನ ಅಪರೋಕ್ಷ

ಬಾಗಿ ಬೇಡುವೆ ಕಲ್ಪವೃಕ್ಷ ಸುರಧೇನೊ

ಜಾಗುಮಾಡದೆ ಸಲಿಸ್ಯನ್ನಪೇಕ್ಷಾ ಸ್ವಾಮಿ 7


ಧೀರ ಗುರುರಾಜ ಕೇಳೋ ಎನ್ನ

ಪಾರ ದೋಷಗಳನ್ನೆ ತಾಳೋ

ಘೋರ ಅಙÁ್ಞನ ಕೀಳೋ - ಪರಲೋಕ

ಸೇರಿಸೆನ್ನನು ಕೃಪಾಳೋ ಸ್ವಾಮಿ 8


ಎಷ್ಟು ಪೇಳಲಿ ಎನ್ನ ತಾತಾ - ಕೃಪಾ -

ದೃಷ್ಟಿಯಲಿ ನೋಡು ನಾನಿನ್ನ ಪೋತಾ

ಧಿಟ್ಟ ನೀ ಗುರು ಜಗನ್ನಾಥಾ - ವಿಠಲನ

ನಿನ್ನೊಳಗೆ ತೋರೋ ದಾತಾ ಖ್ಯಾತಾ 9

***