ಎಲ್ಲಿ ಪೋದ ಶಿರಿನಲ್ಲತಾ
ನೆಲ್ಲಿ ಪೋದ ಶಿರಿನಲ್ಲ ಪ
ಎಲ್ಲಿ ಪೋದ ಪದಪಲ್ಲವಭಜಿಪರ
ನಲ್ಲೆ ಬಿಟ್ಟು ಪರನಲ್ಲೇರಿಗೊಲಿದು ತಾ ಅ.ಪ
ಸತಿ ಸುತ ಮುನಿಕಿಂತತಿಹಿತ ಪ್ರೀಯರು
ಮತಿವಂತರೆ ಎನಗತಿ ಎಂಬುವ ತಾ 1
ಲಕುಮಿಯಕಿಂತಲು ಭಕುತರು ಎನಗೆ
ಸಕಲಭಾಗ್ಯ ಪರಸುಖವೆಂಬುವ ತಾ 2
ಕಟ್ಟು ಕಾವಲಿ ಪರರಟ್ಟುಳಿ ಇಲ್ಲವೊ
ಬಿಟ್ಟರೆ ಭಕುತರು ಕಟ್ಟೋರು ಎಂಬುವ 3
ಎಲ್ಲಿರಿಗತಿ ನಾ ಬಲ್ಲಿದ ಎನಪಾದ
ಪಲ್ಲವ ಭಜಕರು ಬಲ್ಲಿದರೆಂಬುವ 4
ದಾತಗುರು ಜಗನ್ನಾಥವಿಠಲ ನೀ
ರೀತಿಯ ಪೇಳಿದ ದೂತ ಪಾಲಕ ತಾ 5
***