Showing posts with label ಅರಿತುಕೊಳ್ಳಿರೊ ಬ್ಯಾಗ ಹರಿಯ ನಾಮಾಮೃತ mahipati ARITUKOLLIRO BYAAGA HARIYA NAAMAAMRUTA. Show all posts
Showing posts with label ಅರಿತುಕೊಳ್ಳಿರೊ ಬ್ಯಾಗ ಹರಿಯ ನಾಮಾಮೃತ mahipati ARITUKOLLIRO BYAAGA HARIYA NAAMAAMRUTA. Show all posts

Wednesday, 1 December 2021

ಅರಿತುಕೊಳ್ಳಿರೊ ಬ್ಯಾಗ ಹರಿಯ ನಾಮಾಮೃತ ankita mahipati ARITUKOLLIRO BYAAGA HARIYA NAAMAAMRUTA




by ಕಾಖಂಡಕಿ ಕೃಷ್ಣರಾಯರು 

ಅರಿತು ಕೊಳ್ಳಿರೊ ಬ್ಯಾಗ ಹರಿಯ ನಾಮಾಮೃತ 
ದೊರಕುವುದಲ್ಲಿದು ನೋಡಿ ಸರ್ಕನೆ ಸರ್ವರಿಗೆಲ್ಲಾ           ।।ಪ।।

ಗುರುಕರುಣ ಕೃಪೆಯಿಂದ ಪರಮ ದಿವ್ಯಾಮೃತವು 
ಸುರಿಸುರಿದು ಚಪ್ಪರಿದು ಸೂರ್ಯಾಡಿ ಸಾರಸವ              ।।೧।।

ಅನುದಿನ ಸೇವಿಸುವ ಅನುಭವಿಗಳೂಟ 
ಏನೆಂದುಸುರಲಿ ನಾ ಆನಂದೋಬ್ರಹ್ಮವ                       ।।೨।।

ಎಂದಿಗೆ ಬಾಹುದು ನೋಡಿ ಸಂದಿಸಿ ಮಾನವಜನ್ಮ 
ಚಂದಮಾಡಿಕೊಳ್ಳಿರೋ ಬಂದ ಕೈಯಲಿ ಬೇಗ                 ।।೩।।

ಆಲಸ್ಯ ಮಾಡಬ್ಯಾಡಿ ವಾಲ್ಗೈಸಿಕೊಳ್ಳಲಿಕ್ಕೆ 
ಸುಲಲಿತವಾಗಿಹುದು ತಿಳಿದು ಕೊಂಬವರಿಗೆ                    ।।೪।।

ಇರುಳ್ಹಗಲ ಪೂರ್ಣ ಸುರವುತಿಹ ಅಮೃತ 
ತರಳ ಮಹಿಪತಿ ಪ್ರಾಣ ಹೊರೆವ ಸಂಜೀವನ                   ।।೫।।
****


ರಾಗ : ಕಾಪಿ  ತಾಳ : ತೀನ್ ತಾಲ (raga tala may differ in audio)
kaapi ರಾಗ ತೀನ್ ತಾಳ

ಅರಿತುಕೊಳ್ಳಿರೊ ಬ್ಯಾಗ ಹರಿಯ ನಾಮಾಮೃತ
ದೊರಕುವದಲ್ಲಿದು ನೋಡಿ ಸರ್ಕನೆ ಸರ್ವರಿಗೆಲ್ಲ ||ಧ್ರುವ||

ಗುರುಕರುಣಕೃಪೆಯಿಂದ ಪರಮದಿವ್ಯಾಮೃತವು
ಸುರಿಸುರಿದು ಚಪ್ಪರಿದು ಸೂರ್ಯಾಡಿ ಸಾರಸವ ||೧||

ನುದಿನ ಸೇವಿಸುವ ಅನುಭವಿಗಳೂಟ
ಏನೆಂದುಸುರಲಿ ನಾ ಅನಂದೋಬ್ರಹ್ಮವಾ ||೨||

ಎಂದಿಗೆ ಬಾಹುದು ನೋಡಿ ಸಂದಿಸಿ ಮಾನವಜನ್ಮ
ಚಂದ ಮಾಡಿಕೊಳ್ಳಿರೊ ಬಂದ ಕೈಯಲಿ ಬ್ಯಾಗ ||೩||

ಆಲಸ್ಯಮಾಡಬ್ಯಾಡಿ ವಾಲ್ಗೈಸಿಕೊಳ್ಳಲಿಕ್ಕೆ
ಸುಲಲಿತವಾಗಿಹುದು ತಿಳಿದುಕೊಂಬವರಿಗೆ ||೪||

ಇರುಳ್ಹಗಲ ಪೂರ್ಣ ಸುರುವುತಿಹ ಅಮೃತ
ತರಳ ಮಹಿಪತಿ ಪ್ರಾಣ ಹೊರೆವ ಸಂಜೀವನ ||೫||
*******

 ಕಾಖಂಡಕಿ ಶ್ರೀ ಮಹಿಪತಿರಾಯರು

ಅರಿತು ಕೊಳ್ಳಿರೊ ಬ್ಯಾಗ ಹರಿಯ ನಾಮಮೃತ ದೊರಕುವದಲ್ಲಿದು ನೋಡಿ ಸರ್ಕನೆ ಸರ್ವರಿಗೆಲ್ಲಾ ಧ್ರುವ ಗುರುಕರುಣ ಕೃಪೆಯಿಂದ ಪರಮ ದಿವ್ಯಾಮೃತವು ಸುರಿಸುರಿದು ಚಪ್ದರಿಸು ಸೂರ್ಯಾಡಿ ಸಾರಸವ 1 

ಅನುದಿನ ಸೇವಿಸುವ ಅನುಭವಿಗಳೂಟ ಏನೆಂದು ಸುರಲಿ ನಾ ಆನಂದೋಬ್ರಹ್ಮವಾ 2 

ಮಾನವ ಜನ್ಮ ಚಂದ ಮಾಡಿಕೊಳ್ಳಿರೊ ಬಂದ ಕೈಯಲಿ ಬ್ಯಾಗ 3 

ಆಲಸ್ಯ ಮಾಡಬ್ಯಾಡಿ ವಾಲ್ಗೈಸಿಕೊಳ್ಳಲಿಕ್ಕೆ ಸುಲಲಿತವಾಗಿಹುದು ತಿಳಿದುಕೊಂಬವರಿಗೆ 4 

ಇರಳ್ಹಗಲ ಪೂರ್ಣ ಸುರವುತಿಹ ಅಮೃತ ತರಳ ಮಹಿಪತಿ ಪ್ರಾಣ ದೊರೆವ ಸಂಜೀವನ 5

***