ನಳಿನ ಮುಖಿ ಇಳೆಯಲಚ್ಚುತಗೆ ನಿಮಗೆ
ಹೊಳೆವೊ ಮಂದಿರವ ಪ.
ರಂಗಗೆ ರಚಿಸಿದ ಶೃಂಗಾರದ ವೈಕುಂಠ
ರಂಗು ಮಾಣಿಕದ ಅರಮನೆ
ರಂಗು ಮಾಣಿಕದ ಅರಮನೆ ರಂಗನ
ಮಂಗಳಾದೇವಿಯರು ಇಳಿಯಲಿ1
ವೀತದೋಷಗೆ ದಿವ್ಯ ಸೇತು ದ್ವೀಪವ ರಚಿಸಿ
ಜಾತಿ ಮಾಣಿಕದ ಅರಮನೆ
ಜಾತಿ ಮಾಣಿಕದ ಅರಮನೆ ರಂಗನ
ಪ್ರೀತಿ ಮಡದಿಯರು ಇಳಿಯಲಿ2
ಪನ್ನಂಗಶಯನಗೆ ಅನಂತಾಸನ ರಚಿಸಿ
ರನ್ನಮಾಣಿಕದ ಅರಮನೆ
ರನ್ನಮಾಣಿಕದ ಅರಮನೆ ರಂಗನ
ಪನ್ನಿಯರು ಬಂದು ಇಳಿಯಲಿ 3
ಪಟ್ಟೆ ಮುತ್ತುಗಳ ಬಿಗಿದು ಇಟ್ಟಾವ ಕನ್ನಡಿ
ಧಿಟ್ಟ ತೋರೋದೆ ಜನಕೆಲ್ಲ
ಧಿಟ್ಟ ತೋರೋದೆ ಜನಕೆಲ್ಲ ಕೃಷ್ಣನ
ಅಷ್ಟು ಮಡದಿಯರು ಇಳಿಯಲಿ 4
ಹಸಿರು ಪಚ್ಚವ ಬಿಗಿದ ಕುಸುರಾದ ಗಿಳಿಬೋದು
ಎಸಕೊ ಮಾಣಿಕದ ಅರಮನೆ
ಎಸಕೋ ಮಾಣಿಕದ ಅರಮನೆ
ದೇವಕಿ ವಸುದೇವ ಬಂದು ಇಳಿಯಲಿ5
ಮುತ್ತು ಮಾಣಿಕದಿಂದ ತೆತ್ತಿಸಿದ ಅರಮನೆ
ಜತ್ತು ತೋರುವುದು ಜನಕೆಲ್ಲ
ಜತ್ತು ತೋರುವುದು ಜನಕೆಲ್ಲ
ಸರಸ್ವತಿ ಮತ್ತೆ ಚತುರ್ಮುಖನು ಇಳಿಯಲಿ 6
ಶುದ್ಧ ರತ್ನಗಳಿಂದ ತಿದ್ದಿ ಕಟ್ಟಿದರಮನೆ
ಎದ್ದು ತೋರುವುದು ಜನಕೆಲ್ಲ
ಎದ್ದು ತೋರುವುದು ಜನಕೆಲ್ಲ
ಪಾರ್ವತಿ ರುದ್ರಾದಿಗಳೆಲ್ಲ ಇಳಿಯಲಿ 7
ಕುಂದಣ ರತ್ನಗಳಿಂದ ಹೊಂದಿ ಕಟ್ಟಿದರಮನೆ
ಅಂಬರಕೆ ಮ್ಯಾಲೆ ತುಳುಕುವ
ಅಂಬರಕೆ ಮ್ಯಾಲೆ ತುಳುಕುವ
ಶಚಿದೇವಿ ಇಂದ್ರಾದಿಗಳೆಲ್ಲ ಇಳಿಯಲಿ 8
ಹಲವು ಮಾಣಿಕದಿಂದ ಬಲುಶೋಭೆ ತೋರುವ
ಬೆಲೆಯಿಲ್ಲದಂಥ ಅರಮನೆ
ಬೆಲೆಯಿಲ್ಲದಂಥ ಅರಮನೆ
ರೇವತಿ ಬಲರಾಮರು ಬಂದು ಇಳಿಯಲಿ9
ಒಂಭತ್ತು ಬಗೆ ರತ್ನ ತಂಬಿ ರಚಿಸಿದ ಮನೆ
ಅಂಬರಕೆ ಮೇಲೆ ತುಳುಕುವ
ಅಂಬರಕೆ ಮೇಲೆ ತುಳುಕುವರತಿದೇವಿಸಾಂಬ ಪ್ರದ್ಯುಮ್ನರು ಇಳಿಯಲಿ10
ತಂದೆ ರಾಮೇಶನ ಒಂದೊಂದು ಮನೆ ಸೊಬಗು
ಚಂದ ತೋರುವುದು ಜನಕೆಲ್ಲ
ಚಂದ ತೋರುವುದು ಜನಕೆಲ್ಲಭಾನು ಮಾನು ಬಂದ ಜನರೆಲ್ಲ ಇಳಿಯಲಿ 11
***