Showing posts with label ಏನು ಮಾಡಿದರೆ ನಾ ನಿನ್ನ ಕಾಂಬೆಶ್ರೀನಿವಾಸನೆ indiresha. Show all posts
Showing posts with label ಏನು ಮಾಡಿದರೆ ನಾ ನಿನ್ನ ಕಾಂಬೆಶ್ರೀನಿವಾಸನೆ indiresha. Show all posts

Saturday, 28 December 2019

ಏನು ಮಾಡಿದರೆ ನಾ ನಿನ್ನ ಕಾಂಬೆಶ್ರೀನಿವಾಸನೆ ankita indiresha

ಏನು ಮಾಡಿದರೆ ನಾ ನಿನ್ನ ಕಾಂಬೆಶ್ರೀನಿವಾಸನೆ ಭಕ್ತ ದೀನಜನ ಬಂಧೊ ಪ

ದುಷ್ಟ ತಂದೆಯ ತಪಕೆ ಬೆಟ್ಟವೇರಲು ತಾಯಿ-ಪೊಟ್ಟಿಯೊಳು ಪರಮೇಷ್ಠಿ ಸುತನು ಕೊಟ್ಟ ಹರಿಮಂತ್ರ ತುಷ್ಟನಾಗುತ ನರಹರಿಯದೃಷ್ಟಿಯಿಂದ ಕಂಡವನಾ ಭೆಟ್ಟಿ ಸಾಧಿಸಲ್ಯಾ 1

ಹುಡುಗತನದಲಿ ತಂದೆ ತೊಡೆಯಾಸಿಗೆ ಬರೆ ತಾಯಿ-ನುಡಿದ ಮಾತನು ಕೇಳಿ ಅಡವಿಯೊಳಗೆಮೃಡ ಶಿಷ್ಟನುಪದೇಶವನು ನಂಬಿ ವೈಕುಂಠವನುಪಡೆದಿರುವ ಬಾಲಕನ ನಡತೆ ನಂಬಿರಲ್ಯಾ 2

ಐದು ಮಂದಿ ತನ್ನ ಕಾದುಕೊಳ್ಳದೆ ಇರಲುದುರುಳನೊಬ್ಬನು ರಾಜಬೀದಿಯೊಳಗೆಕೂದಲು ಹಿಡಿದೆಳೆದು ತರಲು ಶ್ರೀಧರನೆ ಎಂದೊದರಿಮೋದಿಸಿದ ಕಾಮಿನಿಯ ಹಾದಿ ಸೇರಿರಲ್ಯಾ 3

ಕುಲಯೋಗಿ ಮುನಿ ಪೂತಾ ನಿನ್ನನು ಬಿಡಲುಕೋತಿ ಸತಿ ಸಹಾಯ ವೃಂದದಿ ಸಹಾಯ ಭೂತನಾಗಿಪ್ರೀತಿಯಲಿ ಲಂಕಾನಾಥನಾಗಿಹ ಮುನಿಪೋತ ರಾಕ್ಷಸನ ಸಖ ನೀತಿ ಸಾಧಿಸಲ್ಯಾ4

ಹೇ ಸುರಾರ್ಚಿತ ಮನುಜ ಕೇಸರಿಯ ಸುರಗೀತಾವಾಸುದೇವ ದ್ವಾರಕೀಶ ಕೃಪಾ ದಾಶರಥೆಶ್ರೀವೆಂಕಟೇಶ ಬದರಿನಿವಾಸ ದಾಸರ ಕಾಯೋಆದರದಿ ಇಂದಿರೇಶ ಕರುಣಾಬ್ಧಿ 5
*********