Showing posts with label ಪರಮಾನಂದದೊಳಿರುವ ಪರಿಯನರಿ ಗರುವ ಬೇಡ raghurama vittala. Show all posts
Showing posts with label ಪರಮಾನಂದದೊಳಿರುವ ಪರಿಯನರಿ ಗರುವ ಬೇಡ raghurama vittala. Show all posts

Thursday, 5 August 2021

ಪರಮಾನಂದದೊಳಿರುವ ಪರಿಯನರಿ ಗರುವ ಬೇಡ ankita raghurama vittala

   ..

ಪರಮಾನಂದದೊಳಿರುವ ಪರಿಯನರಿ

ಗರುವ ಬೇಡ ಹೇ ಮನಸಾ ಪ


ಸಿರಿವರ ನಾರಾಯಣ ನಾಮಾಮೃತ

ನರಘಳಿಗೆಯು ಮರೆಯದೆ ನೆನೆ ಮನಸಾಅ.ಪ


ಇಂದಿರೆಯರಸನ ಸುಂದರ ಚರಣಗ

ಳಂದದ ಶ್ರೀ ತುಳಸಿಯ ದಳದಿ

ಚಂದದೊಳರ್ಚಿಸಿ ಕುಂದದ ಭಕುತಿಯೊಳಾ

ನಂದದೊಳಿರು ಹೇ ಮನಸಾ 1

ಸಿರಿ ರಾಮನ ಮಂಗಳ ಮೂರ್ತಿಯ ಘನ

ಕೊರಳೊಳು ಹಾರಗಳರ್ಪಿಸುತ

ಪರಿಪರಿ ಪರಿಮಳ ಪುಷ್ಪಗಳಿಂದಲಿ

ಕರುಣಾಕರನನರ್ಚಿಸು ಮನಸಾ2

ಸರ್ವಾಂತರ್ಗತ ಜಗದುದರನ ನೀ

ನಿರ್ಮಲ ಪೀಠದಿ ಕುಳ್ಳಿರಿಸಿ

ಸರ್ವಷಡ್ರಸೋಪೇತ ಸುಭೋಜನ

ಸರ್ವಾತ್ಮನಿಗರ್ಪಿಸು ಮನಸಾ 3

ಸುಫಲ ಕ್ಷೀರ ತಾಂಬೂಲಗಳರ್ಪಿಸಿ

ಸಫಲಗೊಳಿಸು ಜನ್ಮವ ಮನಸಾ

ಅಪಾರಮಹಿಮನ ಗುಣಗಳ ಕೀರ್ತಿಸಿ

ಕೃಪಾನಿಧಿಯ ನಮಿಸೆಲೊ ಮನಸಾ 4

ಅಗಣಿತ ಮಹಿಮನಿಗಾರ್ತಿಗಳರ್ಪಿಸಿ

ಮಿಗೆ ಭಕ್ತಿಲಿ ನಮಿಸೆಲೊ ಮನಸಾ

ಸುಗುಣಮಣಿಯು ರಘುರಾಮವಿಠಲ ನಿ

ನ್ನಗಲದೆ ಹೃದಯದಲಿಹ ಮನಸಾ5

****