>>
ಭಾಳೆ ಗಾಬರಿಗೊಂಡಳು ಇಂದಿರಾದೇವಿಭಾಳೆ ಗಾಬರಿಗೊಂಡಳು ವ್ಯಾಲಾಶಯನನು ಇವಳ ಪೇಳಿದಂತಿರಲುಏನು ಬಾಳು ಯಾತಕೆ ಎಂದಳು ಪ.
ಸಂಡಿಗೆ ಹಪ್ಪಳ ಮಂಡಗಿ ಗುಳ್ಳೋರಿಗೆ ದಿಂಡು ಸೂರಣವು ಮೊದಲಾಗಿದಿಂಡು ಸೂರಣವು ಮೊದಲಾಗಿ ಬಡಿಸೋರುದುಂಡು ಮುತ್ತುಗಳು ಉದುರುತ1
ಅಪಾರ ಮಹಿಮಗೆ ರೂಪಸುಂದರಿಯರು ಸೂಪ ಪರಮಾನ್ನ ಮೊದಲಾಗಿಸೂಪÀ ಪರಮಾನ್ನ ಮೊದಲಾಗಿ ಬಡಿಸುವವರಭಾಪುರಿ ಮುತ್ತು ಉದುರುತ 2
ನಾರಿಯರು ತಾವೆಲ್ಲ ಹಾರ ಭಾರಗಳಿಟ್ಟುಕ್ಷೀರ ಮಧು ಘೃತ ಮೊದಲಾಗಿಕ್ಷೀರ ಮಧು ಘೃತ ಮೊದಲಾಗಿ ಬಡಿಸುವವರತೋರ ಮುತ್ತುಗಳು ಉದುರುತ 3
ನಗಧರನ ಪುರದೊಳಗೆ ಹಗಲು ರಾತ್ರಿಯು ಬಂದೆಝಗ ಝಗಿಸುವ ಮಣಿಯು ಖಚಿತದಝಗ ಝಗಿಸುವ ಮಣಿಯು ಖಚಿತವಾದುದರಿಂದಹಗಲು ರಾತ್ರಿಗಳು ತಿಳಿಯವು4
ಮಂದ ಗಮನೆಯರೆಲ್ಲ ಮಿಂದು ಮಡಿಯುಟ್ಟು ಇಂದಿರಾಪತಿಯ ಸರಿಯಾಗಿಇಂದಿರಾಪತಿಯ ಸರಿಯಾಗಿ ಊಟಕ್ಕೆ ಬಂದುಕುಳಿತವರು ಕಡೆಯಿಲ್ಲ5
ಪುಂಡರಿಕಾಕ್ಷÀನು ಉಂಡು ಕೈತೊಳೆದನು ದುಂಡುಮಲ್ಲಿಗೆಯ ಸೆಳಿಮಂಚದುಂಡು ಮಲ್ಲಿಗೆಯ ಸೆಳಿ ಮಂಚವನೇರಿದ ಪಾಡವಪ್ರಿಯ ಹರುಷದಿ 6
ಹದಿನಾರುಸಾವಿರ ಚದುರೆಯರು ಒಂದಾಗಿಚಲುವ ರಾಮೇಶನ ಉಪಚಾರಚಲುವ ರಾಮೇಶನ ಉಪಚಾರ ಮಾಡುವ ಸುದತೆಯರ ಸುಖಕೆ ಎಣೆಗಾಣೆ7
****