ಕಂಡಿರ್ಯಾ ನೀವು ಕಂಡಿರ್ಯಾ ಮಂಡಲದೊಳು ನಿಜ ಕಂಡಿರ್ಯಾ p
ಮಂಡೆಯ ಮರೆಯಲ್ಯ ಖಂಡವಾಗಿಹುದು 1
ಪಿಂಡಬ್ರಹ್ಮಾಂಡಕೆ ಭೇದದೋರದಿದು 2
ಹಿಂಡದೈವಕ ತಾಪ್ರಚಂಡನಾಗಿಹುದು 3
ಕಂಡವರಾಶ್ರಯ ಪಂಡಿತರಿಗೆ ಪ್ರಿಯ 4
ಕಂಡವರಕಂಡು ಕೂಡಿಕೊಂಬುದಿದು 5
ನೋಡಿದವರ ಕೂಡ ನೋಟಮಾಳಾಹುದು6
ಮೂಢ ಮಹಿಪತಿ ಪ್ರಾಣದೊಡೆಯನಾಗಿಹ್ಯ ನಿಜ 7
****