Showing posts with label ಎಲ್ಯಾಡಿ ಬಂದ್ಯೋ ಎನ್ನ ರಂಗಯ್ಯಾ ನೀ rangavittala. Show all posts
Showing posts with label ಎಲ್ಯಾಡಿ ಬಂದ್ಯೋ ಎನ್ನ ರಂಗಯ್ಯಾ ನೀ rangavittala. Show all posts

Wednesday, 11 December 2019

ಎಲ್ಯಾಡಿ ಬಂದ್ಯೋ ಎನ್ನ ರಂಗಯ್ಯಾ ನೀ ankita rangavittala

ರಾಗ: ಶಂಕರಾಭರಣ ತಾಳ: ತ್ರಿಪುಟ

ಎಲ್ಯಾಡಿ ಬಂದ್ಯೋ ಎನ್ನ ರಂಗಯ್ಯಾ ನೀ
ಎಲ್ಯಾಡಿ ಬಂದ್ಯೋ ಎನ್ನ ಕಣ್ಣ ಮುಂದಾಡದೆ ||ಪ||

ಆಲಯದೊಳಗೆ ನೀನಾಡದೆ ಚಿನಿ
ಪಾಲು ಸಕ್ಕರೆ ನೀನೊಲ್ಲದೆ ಚಿಕ್ಕ
ಬಾಲರೊಡನೆ ಕೂಡ್ಯಾಡದೆ ಮುದ್ದು
ಬಾಲಯ್ಯ ನೀ ಎನ್ನ ಕಣ್ಣ ಮುಂದಾಡದೆ ||೧||

ಬಟ್ಟ ಮುತ್ತಿನ ಬೊಗಸೆ ಕಂಗಳು ಪಣೆಯೊ
ಳಿಟ್ಟ ಕಸ್ತೂರಿ ತಿಲಕದಂದವು
ದಿಟ್ಟತನದಿ ಕೂಡ್ಯಾಡಲು
ಪುಟ್ಟ ಕೃಷ್ಣಯ್ಯ ನೀ ಎನ್ನ ಕಣ್ಣ ಮುಂದಾಡದೆ ||೨||

ಅಷ್ಟ ದಿಕ್ಕಿಲಿ ಅರಸಿ ಕಾಣದೆ ಬಹಳ
ದೃಷ್ಟಿಗೆಟ್ಟೆನು ನಿನ್ನ ನೋಡದೆ ಇ
ನ್ನೆಷ್ಟು ಹೇಳಲಿ ಕೇಳಬಾರದೆ ರಂಗ

ವಿಠಲ ನೀ ಎನ್ನ ಕಣ್ಣ ಮುಂದಾಡದೆ ||೩||
*************