..
kruti by ವಿದ್ಯಾರತ್ನಾಕರತೀರ್ಥರು vidyaratnakara teertharu
ಬಾರೊ ನಂದನಂದನ ಅರವಿಂದಲೋಚನ ಪ
ಅರವಿಂದಲೋಚನ ಭವಬಂಧ ಮೋಚನ ಅ.ಪ
ದುರುಳ ದುರ್ಯೋಧನನ ಅನುಜ
ಖಳ ದುಶ್ಶಾಸನ
ಕರದಿ ಎನ್ನ ಸೀರೆ ಪಿಡಿದು
ಭರದಿ ಎಳೆಯುವ 1
ಅರಿಯದಂತೆ ಇರುವರೆಲ್ಲ
ಕಿರಿಯ ಜನಗಳು
ಹರಿಯೆ ಕರುಣಾನಿಧಿಯೇ ಎನ್ನ
ಮೊರೆಯ ಕೇಳಲೊ 2
ಕಾಮ ಜನಕ ನಾಮಗಿರಿ ಶ್ರೀ
ಸ್ವಾಮಿ ನರಹರೆ
ಹೇಮಕಶಿಪು ತನುಜನಂತೆ
ಪ್ರೇಮದಿ ಸಲಹೆಲೊ 3
***