Showing posts with label ಬ್ರಹ್ಮಾದಿವಂದ್ಯ ಪರಬ್ರಹ್ಮಾನೆ ಕಾಯೊ uragadrivasa vittala. Show all posts
Showing posts with label ಬ್ರಹ್ಮಾದಿವಂದ್ಯ ಪರಬ್ರಹ್ಮಾನೆ ಕಾಯೊ uragadrivasa vittala. Show all posts

Monday, 2 August 2021

ಬ್ರಹ್ಮಾದಿವಂದ್ಯ ಪರಬ್ರಹ್ಮಾನೆ ಕಾಯೊ ankita uragadrivasa vittala

ಬ್ರಹ್ಮಾದಿವಂದ್ಯ ಪರಬ್ರಹ್ಮಾನೆ ಕಾಯೊ

ಅಹಂಬ್ರಹ್ಮಭಾವವ ಬಿಡಿಸೋ ಪ


ಬ್ರಹ್ಮಾನ ಜನಕನೆ ಬ್ರಹ್ಮಾಂಡದೊಡೆಯ

ಬ್ರಹ್ಮಾಂಡಾಂತರ್ಯಾಮಿ ಸಲಹೋ ಅ.ಪ


ಸತ್ಯವ್ರತನೆ ನೀ ಸತ್ಯಪರನು ಜಗ ಸತ್ಯ ಸೃಜಿಸಿ ಪೊರೆವೇ

ಸತ್ಯಾತ್ಮಕನೆ ನೀ ತತ್ತದಾಕಾರದೊಳು ನಿತ್ಯ ನಿರ್ಲಿಪ್ತನಹುದೋ 1

ಏಕರೂಪನೆ ಅನೇಕ ರೂಪದಿ ಎಲ್ಲಾ ಲೋಕಗಳೆಲ್ಲಾ ಪಾಲಿಪೆ

ಏಕಮೇವನೆ ಮೂಲವಾದ ಪ್ರಕೃತಿಯಿಂದ

ಲೋಕಗಳನೆಲ್ಲ ಮಾಳ್ವೆ 2

ನಿನ್ನಾಶ್ರೈಸಿದ ಭಿನ್ನಪ್ರಕೃತಿ ತ್ರಿಭಿನ್ನಗೈಸಿ ಅಂದು ಜಗದಾ

ಘನ್ನಾಖ್ಯವೃಕ್ಷದಿ ಬನ್ನ ಸುಖವು ಎಂಬ

ಪಣ್ಣನ್ನ ನಿರ್ಮಿಸಿದೆಯೋ 3

ಮುನ್ನ ವೃಕ್ಷಕೆ ಬೇರು ಭಿನ್ನತ್ರಿಗುಣಗಳು

ಪಣ್ಣಿಗೆ ನಾಲ್ಕು ರಸವೋ

e್ಞÁನಪಂಚಕ ಬಿಳಲು

ಘನ್ನಷಡೂರ್ಮಿಗಳನ್ನೆ ನಿರ್ಮಿಸಿ ಪೊರೆವೇ 4

ಕೊಟ್ಟೆ ಸಪ್ತಧಾತು ಅಷ್ಟವಿಟಪಿಗಳನಿಟ್ಟೆ ನವಾಕ್ಷಪೊಟರೆ

ದಟ್ಟದಶಚ್ಛದ ಕೊಟ್ಟು ಜಗವೃಕ್ಷ ಸೃಷ್ಟಿಯ ಮಾಡಿ ಮೆರೆದೇ 5

ಅಟ್ಟಹಾಸದಿ ಫಲಮುಟ್ಟದೆ ಇಹ ಖಗಶ್ರೇಷ್ಟನೆ ನೀ ತುಷ್ಟನೋ

ಕೊಟ್ಟ ಫಲವನುಂಡಷ್ಟೂ ಸುಖಿಪ ಜೀವರೆಷ್ಟೋ ಜಗವರಿಯೇ 6

ವ್ಯಷ್ಟೀಸಮಷ್ಟಿಯ ಸೃಷ್ಟೀಯೊಳು ನೀನೆ ಶ್ರೇಷ್ಠನೇ ವ್ಯಾಪಿಸಿರುವೇ

ದೃಷ್ಟಿಗೋಚರವಲ್ಲ ಅಷ್ಟಕರ್ತೃ ಪರಮೇಷ್ಟೀಜನಕ ಸಲಹೋ 7

ಅಪ್ರಾಪ್ಯಮನೋವಚ ತ್ವತ್ ಪ್ರಾಪ್ತಿಎಂತಯ್ಯ ತ್ವತ್ಪ್ರಸಾದವಿಲ್ಲದೇ

ಅಪ್ರಾಬುದ್ಧÀ್ದನು ನಾನು ಅಪ್ರಾಕೃತನೆ

ಎನ್ನ ಬಂಧಪ್ರಕೃತಿಯನೆ ಹರಿಸೋ 8

ದುಷ್ಟರ ಶಿಕ್ಷಕ ಶಿಷ್ಟರ ಪಾಲಕ ನಿರ್ದುಷ್ಟಫಲದಾಯಕ

ಸೃಷ್ಟಿಯೊಳಗೆ ಸ್ವನಿಷ್ಠೆಯಿಂದಲೀ ಜಗದೃಷ್ಟೀಗೋಚರನಾಗುವೆ 9

ಪಕ್ಷೀಂದ್ರವಾಹ ತವ ಸಾಕ್ಷಾತ್ ಸ್ವರೂಪ

ಮುಮುಕ್ಷುಗಳಿಗೆ ಸಾಕ್ಷಿ

ಚಕ್ಷುಗೋಚರನಲ್ಲ ಸಾಕ್ಷೀಮೂರುತಿ

ಮನದಕ್ಷಿಯೊಳು ಪೊಳೆವೇ 10

ಭಕ್ತಿವಿರಹಿತ ದುರ್ಯುಕ್ತಕಾರ್ಯದಿ ಮನ ಸಕ್ತವಾಗಿಹುದು

ನಿತ್ಯಯುಕ್ತಿಯ ತೋರಿ ಭವಮುಕ್ತನಾಗಲು

ತ್ವಧ್ಭಕ್ತಿಯ ಕೊಡು ನಿತ್ಯ11

ಹತ್ತಿಬಹುದೂ ಬೆನ್ಹತ್ತಿಕರ್ಮವು ಮತ್ತೆ ಸುತ್ತೀಸುತ್ತುತ ಜನ್ಮವಾ

ತೆತ್ತುತೆತ್ತು ಬೇಸತ್ತುಹೋಯಿತು

ಎನಗೆ ಉತ್ತಮಗತಿ ತೋರದೇ12

ಘೋರದುರಿತ ಪರಿಹಾರ ಮಾಡಿ ಪೊರೆ ಮಾರಾರಿಪಿತವಂದ್ಯ

ಬಾರಿಬಾರಿಗೆ ನಿನ್ನ ಚಾರು

ಚರಣಸ್ಮರಣಾರಾಧನೆ (ಅದು) ಸಾಕೋ 13

ಸಾರಿದೆನೋ ಶ್ರೀ ವೇಂಕಟೇಶಾಭಿನ್ನ ಉರಗಾದ್ರಿವಾಸ ವಿಠಲಾ

ದಾರಿ ತೋರದು ಸಂಸಾರಶರಧಿಯೊಳು

ಪಾರುಗಾಣಿಸಿ ಪೊರೆಯೋ 14

*****