ನಮೋ ನಮೋ ಶ್ರೀ ರಾಘವೇಂದ್ರ ಸದ್ಗುಣ ಸಾಂದ್ರ ।
ಕಮಲನಾಭನ ದಾಸ ಕಮಲಾಪ್ತಭಾಸ ॥ ಪ ॥
ದೇಶದೇಶಗಳಿಂದ ದೈನ್ಯದಿಂದಲಿ ಬಂದ ಅ -
ಶೇಷ ಜನರುಗಳನ್ನು ಸಲಹುವ ವಿಶಿಷ್ಟ
ನಾ ಸೇರಿದೆನೋ ನಿನ್ನ ನಮಿತಜನ ಪ್ರಸನ್ನ
ಭಾಸುರ ಚರಿತನೆ ಭಜಿಸುವೆನು ಅನವರತ ॥ 1 ॥
ಭೇದಾರ್ಥ ಜಲಜಾರ್ಕ ಭೂರಿ ಬಲತರ ತರ್ಕ
ವಾದಿಶೈಲ ಕುಲಶ ವರಹಸುತೆ ವಾಸ
ಬಾಧಿಸುವ ಅಘ ಜೀರ್ಣ ಮಾಡು ಗುರುವರ ಪೂರ್ಣ -
ಬೋಧಮತ ಸಂಭೂತ ಭೂರಿ ಪ್ರಖ್ಯಾತ ॥ 2 ॥
ನತಜನಾಶ್ರಯ ಪ್ರೀಯ ನೆರೆ ನಂಬಿದೆನೋ ಮಾಯ -
ಮತ ಕದಳಿ ಗಜೇಂದ್ರ ವಿಬುಧಾಬ್ದಿ ಚಂದ್ರ
ಕ್ರತುಭುಕ್ ಜಗನ್ನಾಥವಿಠಲನ ನಿಜದೂತ
ತುತಿಸಲಾಪೆನೆ ನಿನ್ನ ಯತಿಶಿರೋರನ್ನ ॥ 3 ॥
****
ರಾಗ ಶಿವರಂಜಿನಿ ಆದಿತಾಳ (raga tala may differ in audio)
ನಮೋ ನಮೋ ಶ್ರೀ ರಾಘವೇಂದ್ರ | ಸದ್ಗುಣ ಸಾಂದ್ರ
ಕಮಲ ನಾಭನ ದಾಸ ಕಮಲಾಪ್ತ ಭಾಸಾ || ಪ ||
ದೇಶ ದೇಶಗಳಿಂದ ದೈನ್ಯದಿಂದಲಿ ಬಂದಾ
ಶೇಷ ಜನರಿಗಳಿಗಿಷ್ಟ ಸಲ್ಲಿಸುವ ವಿಶಿಷ್ಟಾ
ನಾ ಸೇರಿದೆನೋ ನಿನ್ನ ನಮಿತ ಜನರ ಪ್ರಸನ್ನ
ಭಾಸುರ ಚರಿತನೆ ಭಜಿಸುವೆನು ಅನವರತ || 1 ||
ಭೇದಾರ್ಥ ಜಲಜಾರ್ಕ ಭೂರಿ ಬಲತರತರ್ಕ
ವಾದಿಶೈಲ ಕುಲಶ ವರಹಸುತೆ ವಾಸಾ
ಬಾಧಿಪ ಅಘ ಜೀರ್ಣ ಮಾಡು ಗುರುವರ ಪೂರ್ಣ
ಬೋಧ ಮತ ಸಂಭೂತ ಭೂರಿ ಪ್ರಖ್ಯಾತ || 2 ||
ನತಜನಾಶ್ರಯ ಪ್ರೀಯ ನೆರೆ ನಂಬಿದೆನೋ ಮಾಯ
ಮತ ಕದಳಿ ಗಜೇಂದ್ರ ವಿಬುಧಾಬ್ದಿ ಚಂದ್ರ
ಕ್ರತು ಭುಕು ಜಗನ್ನಾಥ ವಿಠಲನ ನಿಜದೂತ
ತುತಿಸಲಾಪೆನೆ ನಿನ್ನ ಯತಿಶಿರೋರನ್ನ || 3 ||
***
Namo namo sri raghavendra | sadguna sandra kamala nabhana dasa kamalapta bhasa || pa ||
desa desagalinda dain’yadindali banda sesa janarigaligista sallisuva visista na serideno ninna namita janara prasanna bhasura caritane bhajisuvenu anavarata || 1 ||
bhedartha jalajarka bhuri balataratarka vadisaila kulasa varahasute vasa badhipa agha jirna madu guruvara purna bodha mata sambhuta bhuri prakhyata || 2 ||
natajanasraya priya nere nambideno maya mata kadali gajendra vibudhabdi candra kratu bhuku jagannatha vithalana nijaduta tutisalapene ninna yatisiroranna || 3 ||
***
Namo namo sri ragavendra sadgunasandra kamalanabanadasa kamalapta basa || pa||
Desadesagalinda dainyadindali banda^^asesha janarugalanna salahuva sugannana
Serideno ninna namitajanara prasannabasuracarita Bajisuvenu anavarata || 1 ||
Bedarthajalajarka buribalataratarkavadi vrukshake kulisa varahasutevasabadhisuva
Agajirna madu guruvara purnabodhamata sanbuta buriprakyata || 2 ||
Natajanasraya priya nerenanbideno mayamatakadaligajendra vibudhabdhicandrakratubuk
Jagannatha viththalana nijadutastutisalapene ninna yatisiroranna || 3 ||
***