Showing posts with label ಳಳ- RSS- ಶತಶತಮಾನದ ಕಲುಷವ others rss. Show all posts
Showing posts with label ಳಳ- RSS- ಶತಶತಮಾನದ ಕಲುಷವ others rss. Show all posts

Friday, 24 December 2021

ಶತಶತಮಾನದ ಕಲುಷವ others rss

   

RSS song .

ಶತಶತಮಾನದ ಕಲುಷವ ಗುಡಿಸುತ ಬನ್ನಿ ತಾಯ ಉಡಿಗೇ

ಹಿಂದುತ್ವದಲಿ ಬಂಧುತ್ವದಲಿ ಒಂದಾಗಿ ಸಾಗಿ ಗುಡಿಗೆ ||ಪ||


ತೊಲಗಿಸಿ ತರತಮ ದೋಷ, ಮೊಳಗಿಸಿ ಸಮತೆಯ ಘೋಷ

ನಮ್ಮೊಳಗಿಲ್ಲವು ಭೇದ, ಆಗದು ಗೆಳೆತನ ಛೇದ

ದೈನ್ಯತೆ ಮಲಿನತೆ ನೀಗುತ ನಡೆವೆವು ನಮಿಸಿ ತಾಯ ಅಡಿಗೇ

ಪದ ಜೋಡಿಸುತ ಭುಜಗೂಡಿಸುತ ಒಂದಾಗಿ ಸಾಗಿ ಗುಡಿಗೆ ||೧||


ಕುಡಿಯುವ ಎದೆಹಾಲೊಂದೇ, ನುಡಿಯುವ ಸವಿಮಾತೊಂದೇ

ಪುಂಗವ ಪುರುಷರ ಆಂಶ, ನಮ್ಮದು ಋಷಿಮುನಿ ವಂಶ

ಮಾತೆಯ ವೈಭವ ಸಾಧನೆಗಾಗಿ ಒಂದುಗೂಡಿ ನಡಿಗೆ

ಪ್ರತಿಚರಣದಲಿ, ಪ್ರತಿಕರಣದಲಿ ಒಂದಾಗಿ ಸಾಗಿ ಗುಡಿಗೆ ||೨||


ನಾಡನೆ ನುಂಗುವ ಹೊಂಚು, ಮಾಡಿಹ ವೈರಿಯು ಸಂಚು

ಉಳಿಯಲು ನಾವು ಸ್ವತಂತ್ರ, ಜಪಿಸುವ ಸಂಘದ ಮಂತ್ರ

ದೇಶಧರ್ಮಗಳ ರಕ್ಷಣೆಗಾಗಿ, ಧರಿಸಿ ವೀರ ತೊಡಿಗೆ

ಗಣವೇಷದಲಿ, ಸಂಘೋಷದಲಿ, ಒಂದಾಗಿ ಸಾಗಿ ಗುಡಿಗೆ ||೩||

***

SataSatamaanada kaluShava guDisuta banni tAya uDigE

hiMdutvadali baMdhutvadali oMdAgi sAgi guDige ||pa||


tolagisi taratama dOSha, moLagisi samateya GOSha

nammoLagillavu BEda, Agadu geLetana CEda

dainyate malinate nIguta naDevevu namisi tAya aDigE

pada jODisuta BujagUDisuta oMdAgi sAgi guDige ||1||


kuDiyuva edehAloMdE, nuDiyuva savimAtoMdE

puMgava puruShara AMSa, nammadu RuShimuni vaMSa

mAteya vaiBava sAdhanegAgi oMdugUDi naDige

praticaraNadali, pratikaraNadali oMdAgi sAgi guDige ||2||


nADane nuMguva hoMcu, mADiha vairiyu saMcu

uLiyalu nAvu svataMtra, japisuva saMGada maMtra

dESadharmagaLa rakShaNegAgi, dharisi vIra toDige

gaNavEShadali, saMGOShadali, oMdAgi sAgi guDige ||3||

***