..
kruti by ಚಿಕ್ಕೋಡಿ ಆಚಾರ್ಯ sirivatsankitaru (chikkodi acharyaru)
ನೋಡೆ ದಯದಿ ಶಿರಿ ನಿನ್ನ ಮಡದಿ ಪ
ನೋಡಿ ನೀ ದಯದಿ ನೀಡು ಕರುಣ ದಯ-
ಮಾಡು ತ್ವರಿತದಿ ಬೇಡುವೆ ಮುದದಿ ಅ.ಪ.
ಮಾಮನೋಹರ ನೀ ಪ್ರೇಮದಿಂದಲಿ ಬಂದ-
ಜಾಮೀಳನ ಪೊರದಾ ಶಾಮಸುಂದರನೇ1
ಭಾರಿ ಭಾರಿಗೆ ಎನ್ನ ದಾರಿದ್ರ್ಯವನಧಿಯ
ತಾರಿಸಬೇಕೆಂದು ಶೇರಿದೆ ನಿನ್ನನ್ನು 2
ಮರೆಯುವುದುಚಿತವೆ ಶಿರಿಯ ರಮಣ ನೀನು
ತರಳ ಧ್ರುವನನ್ನ ಪೊರೆದಂಥ ದೇವ ನೀ 3
ಆರ್ತರಕ್ಷಕ ನೀನು ಪಾರ್ಥನಾ ಸೂತನು
ಸಾರ್ಥಕ ಮಾಡು ಲೋಕ ಕರ್ತೃ ದಯಾಪರನೆ 4
ಸರಸಿಜನಾಭನಾದ ಸಿರಿವತ್ಸಾಂಕಿತ ನೀನು
ಮರೆಯಬ್ಯಾಡೆನ್ನಯ ಮೊರೆಯನು 5
***