Showing posts with label ಕಾಯೋ ಕಾಯೋ ಕಾಯೋ ವರವೀಯೋ venugopala vittala vijaya dasa stutih. Show all posts
Showing posts with label ಕಾಯೋ ಕಾಯೋ ಕಾಯೋ ವರವೀಯೋ venugopala vittala vijaya dasa stutih. Show all posts

Sunday, 1 August 2021

ಕಾಯೋ ಕಾಯೋ ಕಾಯೋ ವರವೀಯೋ ankita venugopala vittala vijaya dasa stutih

 ..

kruti by venugopala dasaru

ಶ್ರೀ ವಿಜಯದಾಸರ ಸ್ತೋತ್ರ ಪದಗಳು


ಕಾಯೋ ಕಾಯೋ ಕಾಯೋ - ವರವೀಯೋ ಪ


ಕಾಯೋ ಕಾಯೋ ವರವೀಯೋ ವಿಜಯ ಗುರುರಾಯ ನೀನಲ್ಲದುಪಾಯ ಮತ್ತಿಲ್ಲ ಅ.ಪ


ತಾಪತ್ರಯ ಬಲುದ್ದೀಪನವಾಗಿದೆನೀ ಪರಿಪಾಲಿಸದೀಪರಿ ಥರವೇ 1


ಪಾಪಗಳೆಣಿಸದೆ ಪಾವನ ಮಾಳ್ಪದುಶ್ರೀಪತಿ ಪಡೆದ ಸುರಾಪಗದಂತೆ 2


ಸ್ವೀಕರಿಸೆನ್ನ ನಿರಾಕರಿಸದೆ ಬಲುವ್ಯಾಕುಲನಾಗಿಹೆ ನೀ ಕರುಣದಲಿ 3


ದೂರ ನೀ ನೋಡಲು ಆರು ಇಲ್ಲವೊ ಗತಿಕಾರುಣ್ಯದಿಂದ ನಿವಾರಿಸೊ ದುರಿತ 4


ಒಂದರಿತವನಲ್ಲ ಇಂದಿರೇಶನ ಪದದ್ವಂದ್ವವ ತೋರೋ ಹೇ ತಂದೆ ಕರುಣದಿ 5


ಮಾನವರೊಳಗೆಲ್ಲ ಈ ನರಮೂರ್ಖನುಏನು ಅರಿಯ ಬಲು ದೀನನಾಗಿಹನು 6


ಆಲಸ್ಯ ತಾಳದು ಪಾಲಿಸು ವೇಣು ಗೋ-ಪಾಲ ವಿಠಲನ ಆಳು ಕೃಪಾಳು 7

***