..
ಬರತಾರಂತ್ಹೇಳೆ ಹರಿಪಾದ ದರ್ಶನಕೆತ್ವರಿತದಿ ಪಾಂಡವರು ಪ.
ಹದಿನಾಲ್ಕು ಲೋಕದ ಪದುಮಗಂಧಿಯರೆಲ್ಲಮದನನಯ್ಯನ ಮನೆನೋಡಲುಮದನನಯ್ಯನ ಮನೆನೋಡೋ ವ್ಯಾಜ್ಯದಿಮುದದಿಂದ ಮುಯ್ಯ ತರುತಾರೆ1
ಸುರನಾರಿಯರು ನಾನಾ ಪರಿಯ ಭೂಷಣವನಿಟ್ಟುಹರಿಯ ಮನೆ ನೋಡೋ ಹರುಷದಿಹರಿಯ ಮನೆ ನೋಡೋ ಹರುಷದಿ ಮುಯ್ಯವತರತಾರೆ ತಾವು ತವಕದಿ2
ನಾರಿಯರೆಲ್ಲರು ನಾನಾ ವಸ್ತಗÀಳಿಟ್ಟುಸಾರಾವಳಿಗಳ ನಿರಿದುಟ್ಟು ಸಾರಾವಳಿಗಳ ನಿರಿದುಟ್ಟು ಹೊರಡೆ ಸೂರ್ಯಮುಳಗಿದನೆ ಆಕಾಶದಲಿ 3
ಅಕ್ಕತಂಗಿಯರು ತಾವು ಚಕ್ಕನೆ ವಸ್ತಗಳಿಟ್ಟುಮಕ್ಕಳಿಗೆ ಬಾಲ್ಯ ಉಡಿಗೆಯಿಟ್ಟುಮಕ್ಕಳಿಗೆ ಬಾಲ್ಯ ಉಡಿಗೆಯಿಟ್ಟು ಹೊರಡಲುಅರ್ಕ ಮುಳುಗಿದ ಆಗಸದಿ 4
ಮಂದ ಗಮನೆಯರೆಲ್ಲ ತುಂಬಿದೊಸ್ತಗಳಿಟ್ಟುಕಂದರಿಗೆ ಬಾಲರ ಉಡುಗೆ ಇಟ್ಟುಕಂದರಿಗೆ ಬಾಲರ ಉಡುಗೆಯಿಟ್ಟು ಹೊರಡಲುಚಂದ್ರಜ್ಯೋತಿಗಳು ಹಿಡಿದಾವೆ 5
ಸುಮನಸೆಯರೆಲ್ಲ ಯಮುನಾದೇವಿಯ ದಾಟಿಧಿಮಿ ಧಿಮಿ ಭೇರಿ ಹೊಯಿಸುತಧಿಮಿ ಧಿಮಿ ಭೇರಿ ಹೊಯಿಸುತ ಬರುವಾಗಭುವನದ ಬೆಳಕು ಹರವಿತು6
ಅಂಬರಕೆ ತುಳುಕುವ ಅಂಬಾರಿ ಆನೆಗಳು ಕುಂಭಿಣಿ ಜಡಿದು ಬರತಾವೆ ಕುಂಭಿಣಿ ಜಡಿದು ಬರತಾವೆ ರಾಮೇಶನ ಪದಾಂಬುಜ ನೋಡೊ ಭರದಿಂದ7
****