..
kruti by ವರದೇಶ ವಿಠಲರು varadesha vittala dasaru
ಗುರುಪ್ರಾಣೇಶದಾಸರಾಯರ ಸ್ತೋತ್ರ
ಗುರು ಪ್ರಾಣೇಶದಾಸರಾಯಾ
ತರುಳನ ಪರಿಪಾಲಿಸು ಜೀಯಾ ಪ
ಶ್ರೀ ಪತಿ ಸದ್ವಂಶೋದ್ಭವನೆ ವರಕವಿ ಪ್ರಾಣೇಶರ ಸುತನೆ
ಕೋಪವಿತಾಪಮೋಹಕ ಜಿತನೆ ಶ್ರೀ ಕಮಲಾಪತಿ ಸೇವಕನೆ
ನೀ ಮಹಾತಾಪಸೋತ್ತ ಮನಾಗಿ
ಭವಜನಿ ತಾಪದಾದಿ ಸಂ -
ತಾಪ ಹರಿಸುತಲಿ ಶ್ರೀಪದ್ಮಜ ಮತ್ತಾಪಿನಾಕಿನುತ
ಶ್ರೀಪರಮಾತ್ಮದಾಸರಿಗೆ ಸದಾಪರೋಕ್ಷ ತೋರ್ದಾ 1
ರತಿಪತಿ ಪಿತನನಾಮ ಸ್ಮರಣೆಯಲ್ಲಿ ನಲಿ -
ಯುತಸುಖಿಸುವಕರುಣಿ ಬಿಡದೆ ಸಂತತ ಹರಿಗುಣಗಾನಾ-
ದಲ್ಲಿ ಬಲುತರನಿರುತಿಹ ಜಾಣಾನಾನತಿ ಪತಿತನಾಗಿ ಇರುವೆ
ಅತಿ ದುಷ್ಕøತಿಯನೆಸಗಿ ಸದ್ಗತಿಗೆ ದಾರಿಗಾಣೇ ಪತಿತಪಾವನ
ಶ್ರೀ ಪತಿಯ ತೋರೆನಗೆ ಅತುಲಸುಗುಣವೃಂದ
ನಿಮ್ಮನಾ ತುತಿಪೆನೆ ಮತಿಮಂದ2
ಕಾಮಕ್ರೋಧಗಳನು ಅಳಿದು ಬಲುತಾಮಸ
ಮತಗಳಹಳಿದು
ರÉೈಪತಿಭೀಮನ ಮತವಿಡಿದು ಶಿಷ್ಯರ
ಪ್ರೇಮದಿಂದ ಪೊರೆದು
ಬಹುಪರಿ ಈ ಮಹಿಯೊಳು ಮೆರೆದೆ
ಪಾತಕಿ ಪಾಮರನೆನ್ನಗೆ
ರಾಮ ಶ್ರೀವರದೇಶ ವಿಠಲನ ದೂತಮಹಾಮುನಿವರದೇಂ-
ದ್ರಾರ್ಯರ ಪದ, ಸುಮದಿರತಿಯನು
ಪ್ರೇಮದಿ ಕೊಡು ಮುದದಿ 3
***