Sunday, 1 August 2021

ಗುರುಪ್ರಾಣೇಶದಾಸರಾಯಾ ತರುಳನ ಪರಿಪಾಲಿಸು ಜೀಯಾ ankita varadesha vittala gurupranesha dasa stutih

 ..

kruti by ವರದೇಶ ವಿಠಲರು varadesha vittala dasaru

ಗುರುಪ್ರಾಣೇಶದಾಸರಾಯರ ಸ್ತೋತ್ರ


ಗುರು ಪ್ರಾಣೇಶದಾಸರಾಯಾ

ತರುಳನ ಪರಿಪಾಲಿಸು ಜೀಯಾ ಪ


ಶ್ರೀ ಪತಿ ಸದ್ವಂಶೋದ್ಭವನೆ ವರಕವಿ ಪ್ರಾಣೇಶರ ಸುತನೆ

ಕೋಪವಿತಾಪಮೋಹಕ ಜಿತನೆ ಶ್ರೀ ಕಮಲಾಪತಿ ಸೇವಕನೆ

ನೀ ಮಹಾತಾಪಸೋತ್ತ ಮನಾಗಿ

ಭವಜನಿ ತಾಪದಾದಿ ಸಂ -

ತಾಪ ಹರಿಸುತಲಿ ಶ್ರೀಪದ್ಮಜ ಮತ್ತಾಪಿನಾಕಿನುತ

ಶ್ರೀಪರಮಾತ್ಮದಾಸರಿಗೆ ಸದಾಪರೋಕ್ಷ ತೋರ್ದಾ 1


ರತಿಪತಿ ಪಿತನನಾಮ ಸ್ಮರಣೆಯಲ್ಲಿ ನಲಿ -

ಯುತಸುಖಿಸುವಕರುಣಿ ಬಿಡದೆ ಸಂತತ ಹರಿಗುಣಗಾನಾ-

ದಲ್ಲಿ ಬಲುತರನಿರುತಿಹ ಜಾಣಾನಾನತಿ ಪತಿತನಾಗಿ ಇರುವೆ

ಅತಿ ದುಷ್ಕøತಿಯನೆಸಗಿ ಸದ್ಗತಿಗೆ ದಾರಿಗಾಣೇ ಪತಿತಪಾವನ

ಶ್ರೀ ಪತಿಯ ತೋರೆನಗೆ ಅತುಲಸುಗುಣವೃಂದ

ನಿಮ್ಮನಾ ತುತಿಪೆನೆ ಮತಿಮಂದ2


ಕಾಮಕ್ರೋಧಗಳನು ಅಳಿದು ಬಲುತಾಮಸ

ಮತಗಳಹಳಿದು

ರÉೈಪತಿಭೀಮನ ಮತವಿಡಿದು ಶಿಷ್ಯರ

ಪ್ರೇಮದಿಂದ ಪೊರೆದು

ಬಹುಪರಿ ಈ ಮಹಿಯೊಳು ಮೆರೆದೆ

ಪಾತಕಿ ಪಾಮರನೆನ್ನಗೆ

ರಾಮ ಶ್ರೀವರದೇಶ ವಿಠಲನ ದೂತಮಹಾಮುನಿವರದೇಂ-

ದ್ರಾರ್ಯರ ಪದ, ಸುಮದಿರತಿಯನು

ಪ್ರೇಮದಿ ಕೊಡು ಮುದದಿ 3

***


No comments:

Post a Comment