Sunday, 1 August 2021

ಕೇಳಿರಿ ಕೌತುಕ ಪೇಳುವೆನೀಗ ಶೀಲ ಶ್ರೀ ಗುರುಗಳ ಕರುಣದಲಿ ankita gopalakrishna vittala

ಕೇಳಿರಿ ಕೌತುಕ ಪೇಳುವೆನೀಗ

ಶೀಲ ಶ್ರೀ ಗುರುಗಳ ಕರುಣದಲಿ ಪ.


ವ್ಯಾಳಶಯನ ರಂಗ ತಾಳಿ ಕರುಣಿಸಿದ

ಮೇಲು ಮೇಲು ಭಕ್ತಿಯ ನೀಡುತಲಿ ಅ.ಪ.


ಅರಿಯದ ದೇಶದಿ ಅರಿಯದ ಕಾಲದಿ

ಅರಿಯದವಸ್ಥೆಯ ಅನುಭವವು

ಸಿರಿಯರಸನ ವ್ಯಾಪಾರವಿದಲ್ಲದಡೆ

ನರರಿಗೆ ಸಾಧ್ಯವೆ ನಾಡಿನೊಳು 1

ಸಂಭÀ್ರಮದಲಿ ಸಮಾರಂಭವು ಕಲೆತಿರೆ

ಬೆಂಬಿಡದಲೆ ರಕ್ಷಿಸುತಿರಲು

ಕುಂಭಿಣಿಯೊಳು ಸ್ಥಿರವಾದ ಪದವಿಗೆ

ಅಂಬುಜನಾಭನ ಕರುಣವಿದು 2

ಅಗ್ನಿಗಳೆರಡು ಕಲೆತು ಶಾಂತವಾಗಿ

ಭಗ್ನವಿಲ್ಲದ ಆನಂದ ತೋರೆ

ವಿಘ್ನವಾಗದ ಕಾಲಗಳೊದಗುತ

ಮಗ್ನಗೈಸಿತಾನಂದದಲಿ 3

ಚಲಿಸದ ವಸ್ತುಗಳ್ ಚಲಿಸಿತು ಮತ್ತೆ

ಚಲನೆಯಿಲ್ಲದೆ ಸುಸ್ಥಿರವಾಯ್ತು

ಬಲು ವಿಚಿತ್ರವು ಭೂತಲದೊಳಗಿದು

ನಳಿನನಾಭನ ಸಮ್ಮತವು4

ಬಿಂಬನಾಗಿ ಹೃದಂಬರ ಮಧ್ಯದಿ

ಸಂಭ್ರಮಗೊಳಿಸೆಲೊ ಶ್ರೀ ವರನೆ

ಬೆಂಬಿಡದಲೆ ನಿತ್ಯ ಇಂಬುಗೊಟ್ಟು ಕಾಯೊ

ಬಿಂಬ ಶ್ರೀ ಗೋಪಾಲಕೃಷ್ಣವಿಠ್ಠಲ 5

***


No comments:

Post a Comment