yes
ರಾಘವೇಂದ್ರ ಪಾಲಿಸಯ್ಯ..ಪಾಲಿಸಯ್ಯ
ಯೋಗಿಚಂದ್ರ ಲಾಲಿಸಯ್ಯ...ಲಾಲಿಸಯ್ಯ
ಅಘನಾಶಕ ಮಂತ್ರಾಲಯ ನಿಲಯ ನಿಲಯ||2||
ಯೋಗಿಶಯನನ ಧ್ಯಾನ ಭಾಗಿರಥಿ ಸ್ನಾನ||2||
ಯಾಗವು ,ಯೋಗವು ಮಾಡಿ ನಾ ಕಾಣೆನಯ್ಯ||2||
||ರಾಘವೇಂದ್ರ||
ತುಂಗತರಂಗಿಣಿಯೊಳು ಮಿಂದು
ಮಡಿಯಲಿ ನಿಂದು
ಅಂಗನೆ ಪುರುಷರು ಸಿಂಧು ವಂದಿಸುತ
||ತುಂಗ||
ಭಂಗುಬತ್ತಿದ ಮುಖ, ಅಂಗಹೀನರ ಶೋಕ||2||
ನಿಲ್ಲಿಸಿ, ನಗಿಸೊ...ಓ ಮಂಗಳ ಮಹಿಮ...
ಮಂಗಳ ಮಹಿಮಾ...||ರಾಘವೇಂದ್ರ||
ವ್ರಂದಾರಕೇಂದ್ರನುತ ಆನಂದತೀರ್ಥ ಪ್ರಣಿತ
ಗ್ರಂಥಾರ್ಥ ಪರಿಮಳ ಗಂಧಪರಿಸುತ
||ವ್ರಂದಾರ||
ಒಂದಾರು ಜನಸುರ ಮಂದಾರ ನೆನಿಸಿ||2||
ಆನಂದ ಮಂದಿರಕ್ರತ ವ್ರಂದಾವನ ಸ್ಥಿರ...
ವ್ರಂದಾವನ ಸ್ಥಿರ...||ರಾಘವೇಂದ್ರ||
ವೇದಾಪುರಾಣ ಶಾಶ್ತ್ರಧಾರ ತೋರಿಸಿ, ವೇದ ಸಾಧಿಸಿ,ಮಾಯಾವಾದಿಗಳನ್ನು ಜಯಿಸಿ
||ವೇದ||
ಭಾದರಾಯಣ ,ಪೂರ್ಣಭೋಧರ ಮೆಚ್ಚಿಸಿ||2||
ಶ್ರೀಧರನ ಹರಿವಿಠ್ಠಲ...ಶ್ರೀಧರನ ಹರಿ ವಿಠ್ಠಲ. ..
ಪ್ರಸಾದ ಹೊಂದಿದ ಗುರು..||ರಾಘವೇಂದ್ರ||