Showing posts with label ವಾಣಿಯೇ ವೀಣಾಪಾಣಿ ಪಾಲಿಸು ಸದಾ shyamasundara. Show all posts
Showing posts with label ವಾಣಿಯೇ ವೀಣಾಪಾಣಿ ಪಾಲಿಸು ಸದಾ shyamasundara. Show all posts

Saturday, 1 May 2021

ವಾಣಿಯೇ ವೀಣಾಪಾಣಿ ಪಾಲಿಸು ಸದಾ ankita shyamasundara

 *

ಶ್ರೀ ಸರಸ್ವತೀದೇವಿಯರ ಸ್ತೋತ್ರ 

ರಾಗ : ಮಧ್ಯಮಾವತಿ    ತಾಳ : ಆದಿ 


ವಾಣಿಯೇ ವೀಣಾಪಾಣಿ 

ಪಾಲಿಸು ಸದಾ ।। ಪಲ್ಲವಿ ।।


ಸ್ಥಾಣು ಜನನಿ ಚತುರಾನನ 

ರಾಣಿ । ಶ್ರೀ ।। ಅ ಪ ।।

ಯತಿತತಿನುತೆ ಕೃತಿಸುತೆ 

ಸರಸ್ವತೀದೇವಿ ।

ಹಿತದಿಂದಲೆನ್ನನು 

ಸುತನೆಂದು ಭಾವಿಸೆ ।। ಚರಣ ।।


ಬುದ್ಧ್ಯಾಭಿಮಾನಿ 

ಸದ್ವಿದ್ಯಾಪ್ರದಾಯಿನಿ ।

ಶುದ್ಧ ಸುಮತಿ ಕೊಟ್ಟು 

ಉದ್ಧರಿಸನುದಿನ ।। ಚರಣ ।।


ಶಾರದೆ ದಯವ್ಯಾಕೆ 

ಬಾರದೆ ಯನ್ನೊಳು ।

ನಾರದ ಸೇವಿತೇ 

ಸೇರಿದೆ ತ್ವತ್ಪಾದ ।। ಚರಣ ।।

ಪವನಾಂತರ್ಗತ ಮಾಧವನ 

ಸನ್ಮಹಿಮೆಯ ।ಕವನದಿಂದಲಿ 

ಸುಸ್ತವನವ ಮಾಡಿಸೆ ।। ಚರಣ ।


ಸಾಮಗಾನ ವಿಲೋಲ 

ಶ್ಯಾಮಸುಂದರ ಸೊಸೆ ।

ಪ್ರೇಮದಿ ಮನ್ಮುಖಧಾಮದಿ 

ವಾಸಿಸೆ ।। ಚರಣ ।।

***

ವಿವರಣೆ-ಆಚಾರ್ಯ ನಾಗರಾಜು ಹಾವೇರಿ,ಗುರು ವಿಜಯ ಪ್ರತಿಷ್ಠಾನ

ಸ್ಥಾಣು ಜನನಿ = ಶ್ರೀ ರುದ್ರದೇವರ ತಾಯಿ 

ಚತುರಾನನ ರಾಣಿ = ಶ್ರೀ ಚತುರ್ಮುಖ ಬ್ರಹ್ಮದೇವರ ನೀತ ಪತ್ನೀ

ಯತಿತತಿನುತೆ = ಯತಿ / ಮುನಿಗಳ ಸಮೂಹದಿಂದ ಸ್ತುತ್ಯಳಾದವಳೇ 

" ಕೃತಿಸುತೆ "

ಕೃತಿ ಪತಿ ಪ್ರದ್ಯುಮ್ನನಿಂದ " ಪಕೃತಿ " ನಾಮಕಳಾದ ಶ್ರೀ ಸರಸ್ವತೀದೇವಿ ಮತ್ತು " ಶ್ರದ್ಧಾ " ನಾಮಕಳಾದ " ಶ್ರೀ ಭಾರತೀದೇವಿ " ಯೆಂಬ ಇಬ್ಬರು ಹೆಣ್ಣು ಮಕ್ಕಳು ಜನಿಸಿದರು. 

" ಸದ್ವಿದ್ಯಾಪ್ರದಾಯಿನಿ "

ಸಮೀಚೀನವಾದ ಭಗವತ್ಪರವಾದ ದಿವ್ಯ ವಿದ್ಯೆಯನ್ನು ಕೊಡತಕ್ಕವಳು.   

ಸಾಮ = ಸಾಮವೇದ 

ಸಾಮಗ = ಶ್ರೀ ಮಹಾವಿಷ್ಣು 

ಗಾನ = ಸಂಕೀರ್ತನೆ 

ಲೋಲ = ಭಕ್ತಿಗೆ ಸುಲಭವಾಗಿ ಒಲಿಯುವ 

" ಶ್ರೀ ಶ್ಯಾಮಸುಂದರ ಸೊಸೆ "

ಎನ್ನ ಬಿಂಬೋsಭಿನ್ನ ಶ್ರೀ ಶ್ಯಾಮಸುಂದರ ರೂಪಿ ಶ್ರೀ ಹರಿಯ ಹಿರಿಯ ಸೊಸೆಯಾದ ನೀನು  

" ಮನ್ಮುಖಧಾಮದಿ "

ನನ್ನ ವದನವೆಂಬ ಮನೆಯಲ್ಲಿ ಬಂದು ಸ್ಥಿರವಾಗಿ ನೆಲೆಸು ಅಂದರೆ, ನನ್ನ ವಾಗಿಂದ್ರಿಯವಾದ ನಾಲಿಗೆಯಲ್ಲಿ ನೆಲೆಸು ಎಂದು ಸತ್ಯಲೋಕ ವಾಸಿಯಾದ ಶ್ರೀ ಸರಸ್ವತೀದೇವಿಯರನ್ನು ಶ್ರೀ ಶ್ಯಾಮಸುಂದರದಾಸರು ಅತ್ಯಂತ ಮನೋಜ್ಞವಾಗಿ ಸ್ತುತಿಸಿದ್ದಾರೆ.

****