Showing posts with label ನಮೋ ನಮೋ ನಾರಾಯಣ ನಮೋ ಶ್ರುತಿ vijaya vittala. Show all posts
Showing posts with label ನಮೋ ನಮೋ ನಾರಾಯಣ ನಮೋ ಶ್ರುತಿ vijaya vittala. Show all posts

Thursday, 17 October 2019

ನಮೋ ನಮೋ ನಾರಾಯಣ ನಮೋ ಶ್ರುತಿ ankita vijaya vittala

ನಮೋ ನಮೋ ನಾರಾಯಣ ನಮೋ ಶ್ರುತಿ ನಾರಾಯಣ
ನಮೋ ಬಾದರಾಯಣ ನರನ ಪ್ರಾಣ ಪ

ಶಿವನ ಮೋದದಲಿ ಪಡೆದೆ ಶಿವರೂಪದಲಿ ನಿಂದೆ
ಶಿವನೊಳಗೆ ಏರಿದೆ ಶಿವನಿಗೊಲಿದೆ
ಶಿವಗೆ ನೀ ಮಗನಾದೆ ಶಿವ ತಾತನೆನೆಸಿದೆ
ಶಿವನ ಮಗನಾ ಪಡೆದೆ ಶಿವನ ಕಾಯ್ದೆ1

ಶಿವಗೆ ಸಹಾಯಕನಾದೆ ಶಿವನ ಕಂಗಡಿಸಿದೆ
ಶಿವನ ಧನುವನು ಮುರಿದೆ ಶಿವನೊಲಿಸಿದೆ
ಶಿವನ ಜಡ ಮಾಡಿದೆ
ಶಿವನ ಒಡನೆ ಬಂದೆ ಶಿವಮುನಿಗೆ ಉಣಿಸಿದೇ ಕೇಶವನೆನಿಸಿದೇ 2

ಶಿವನ ಜಡೆಯೊಳಗಿದ್ದ ಶಿವಗಂಗೆಯ ಪೆತ್ತೆ
ಶಿವನ ಕೂಡಲಿ ಕಾದಿದವನ ಭಾವ
ಶಿವ ಭಕ್ತನ್ನ ನಿನ್ನವನಿಂದ ಕೊಲ್ಲಿಸಿದೆ
ಶಿವನ ಶೈಲವನೆತ್ತಿದವನ ವೈರಿ3

ಶಿವ ನುಂಗಿದದ ನುಂಗಿದವನ ಒಡನಾಡುವ
ಶಿವ ಪರಾಶಿವ ನಿನ್ನ ಶಿವ ಬಲ್ಲನೇ
ಯವೆ ಇಡುವನಿತರೊಳಗೆ ಧವಳ ಹಾಸಾ4

ಶಿವನ ಮೇಲಿದ್ದ ಸಹಭವೆ ರಮಣ ಸರ್ವದಾ
ಶಿವನೊಳಗಿಳಿದ ಶಿಷ್ಯನಿವ ಹರಾತೀ
ತಲ್ಪ ಶಿವ ಸಮಾನಿಕ ರೂಢ
ಶಿವನ ಮನೆ ತೊಲಗಿಸುವ ಶಿವ ಬಾಂಧವಾ 5

ಶಿವನ ಧೊರಿಯೆ ಜ್ಞಾನ ಶಿವ ಹಚ್ಚುವದೆ ಕೊಡು
ಶಿವಮಣಿ ಎನಿಸುವ ಸ್ತವ ಪ್ರಿಯನೇ
ವಾಹನ ವೈರ ಶಿರವ ತರಿಸಿದೆ ದೇವ
ಶಿವ ಪ್ರತಿಷ್ಠಿಸಿದೆ ಶಿವಗೆ ಕಾಣಿಸದಿಪ್ಪೆ6

ಶಿವನ ಸೋಲಿಸಿದವನ ಜವಗೆಡಿಸಿದೆ
ಶಿವನು ಕುದರಿಯ ಹೆರವ
ಅವನು ಕಾಯಿದ ಗೋವ
ಶಿವನವತಾರ ಶಸ್ತ್ರವನು ಹಳಿದೆ 7

ಶಿವನಧರ್Àನಾಗಿ ದಾನವನು ಕೊಂದ ಮಹಿಮಾ
ಶಿವಋಷಿ ಪೇಳಿದ ಯುವತಿ ರಮಣಾ
ಶಿವನ ವೀರ್ಯವ ಧರಿಸಿದವನ ಮುಖದಲಿ ಉಂಬ
ಅವರ ಬೆಂಬಲವೇ ಯಾದವಕುಲೇಶಾ 8

ಶಿವಗೆ ತ್ವಂಚ ಬಾಹುಯೆಂದು ಪೇಳಿ ಮೋಹ
ದಿವಿಚಾರಿಗಳ ತಮಸಿಗೆ ಹಾಕುವೆ
ಶಿವಮೂರುತಿ ನಮ್ಮ ವಿಜಯವಿಠ್ಠಲರೇಯ
ಶಿವನಾಳು ಮಾಡಿ ಆಳುವ ದೈವವೇ9
**********