ರಾಗ ಆನಂದಭೈರವಿ ಆದಿತಾಳ
ಜಗದಂತರ್ಯಾಮಿಯೆನ್ನ ಸ್ವಾಮಿ ||ಪ||
ಅಗಣಿತಗುಣ ನೀನು ನಿನ್ನ ಗುಣವಲ್ಲವೆಂದು
ಬಗೆವವ ಜಗದೊಳಗೆ ಬ್ರಹ್ಮಹತ್ಯಗಾರ ||ಅ||
ಜಗತುಕರ್ತು ನೀನಿರಲು ಅನ್ಯರನ್ನೆ ದೈವವೆಂದು
ಬಗೆವವ ಜಗದೊಳಗೆ ಸ್ವರ್ಣಸ್ತೇಯಿ ||
ಜಗತುಕರ್ತು ನೀನಿರಲು ಅನ್ಯದೈವರೊಡೆಯರೆಂದು
ಬಗೆವವ ಜಗದೊಳಗೆ ಮದ್ಯಪಾಯಿ ||
ಜಗದ ತಾಯಿ ತಂದೆ ನೀನು , ನಿನ್ನ ತಾನೇ ಎಂದು
ಬಗೆವವ ಜಗದೊಳಗೆ ಗುರುತಲ್ಪಗ ||
ಅವರ ತತ್ಸಂಯೋಗಿಗಳು ಪಂಚಮಹಾಪಾತಕರು
ದಾಸರ ಸಂಗದೊಳಿಡು ಪುರಂದರವಿಠಲ ||
***
ಜಗದಂತರ್ಯಾಮಿಯೆನ್ನ ಸ್ವಾಮಿ ||ಪ||
ಅಗಣಿತಗುಣ ನೀನು ನಿನ್ನ ಗುಣವಲ್ಲವೆಂದು
ಬಗೆವವ ಜಗದೊಳಗೆ ಬ್ರಹ್ಮಹತ್ಯಗಾರ ||ಅ||
ಜಗತುಕರ್ತು ನೀನಿರಲು ಅನ್ಯರನ್ನೆ ದೈವವೆಂದು
ಬಗೆವವ ಜಗದೊಳಗೆ ಸ್ವರ್ಣಸ್ತೇಯಿ ||
ಜಗತುಕರ್ತು ನೀನಿರಲು ಅನ್ಯದೈವರೊಡೆಯರೆಂದು
ಬಗೆವವ ಜಗದೊಳಗೆ ಮದ್ಯಪಾಯಿ ||
ಜಗದ ತಾಯಿ ತಂದೆ ನೀನು , ನಿನ್ನ ತಾನೇ ಎಂದು
ಬಗೆವವ ಜಗದೊಳಗೆ ಗುರುತಲ್ಪಗ ||
ಅವರ ತತ್ಸಂಯೋಗಿಗಳು ಪಂಚಮಹಾಪಾತಕರು
ದಾಸರ ಸಂಗದೊಳಿಡು ಪುರಂದರವಿಠಲ ||
***
pallavi
jagadantaryAmi yenna svAmi
caraNam 1
agaNita guNa nInu ninna guNavallavendu bagevava jagadoLage brahmahatyagAra
caraNam 2
jagatu karta nIniralu anyaranne daivavendu bagevava jagadoLage svarNa stEyi
caraNam 3
jagadoDeya nIniralu anya daivaroDeyarendu bagevava jagadoLage madhyapAyi
caraNam 4
jagada tAyi tande nInu ninna tAnE endu koNDu bagevava jagadoLage gurutalpaga
caraNam 5
avara tatsamyOgigaLu pancamahA pAtakaru dAsara sangadoniDu purandara viTTala
***