ankita ಪಂಡರೀನಾಥವಿಠಲ
ರಾಗ: ಕಲ್ಯಾಣಿ ತಾಳ: [ಆದಿ]
ರಾಘವೇಂದ್ರ ಪೊರೆ ಎನ್ನ ಗುರು ಪ
ರಾಘವೇಂದ್ರ ದುರಿತೌಘ ವಿದೂರನೆ
ರಾಗರಹಿತ ಹೇ ಭಾಗವತರ ಪ್ರಿಯ
ಕೂಗಿ ಕರೆಯುವೆನು ಭಕ್ತಿ ಭಾವದಲಿ
ನೀಗಿಸು ಕರುಣದಿ ಈ ಭವಸಾಗರ ಅ ಪ
ಯೋಗ ಪ್ರವೀಣನೆ ಸದ್ಗುಣಸಾಂದ್ರನೆ
ವಾಗ್ದೇವಿಯ ಮಹದನುಗ್ರಹಪಾತ್ರನೆ
ತ್ಯಾಗಿ ವಿರಾಗಿಯೆ ಭಕ್ತಾಭೀಷ್ಟದ
ಬಾಗಿ ಭಜಿಸುವೆನು ವ್ಯಾಸ ಪ್ರಹ್ಲಾದನೆ 1
ಶೇಷಾವೇಶಿತ ವ್ಯಾಸರಾಜಗುರು
ದೇಶಿಕ ಶ್ರೀ ಬ್ರಹ್ಮಣ್ಯರ ಕರಜನೆ
ಆಶಿಪೆ ಭಕ್ತಿ ಜ್ಞಾನ ವಿರಕ್ತಿಯ
ರಾಶಿಯ ಕೊಡು ನೀ ಬೇಸರಿಸದಲೆ 2
ಗುರುವರ ನಿಮ್ಮನು ಭಜಿಸುತ್ತಿರುವೆನು
ಪರಿಪರಿ ನಿಮ್ಮನು ಸ್ಮರಿಸುತ್ತಿರುವೆನು
ಪೊರೆಯದೆ ಬಿಟ್ಟರೆ ಬಿಡುವೆನೆ ಪಾದವ
ಸಿರಿ ಪಂಢರಿನಾಥವಿಠಲನ ಪ್ರೀಯ 3
***