Showing posts with label ವೆಂಕಟೇಶನೆ ಬಲ್ಲ ಪರಮ ಪಾತಕೀಯಾ ಕಿನ್ನೇಶ ಮುನಿದು vijaya vittala. Show all posts
Showing posts with label ವೆಂಕಟೇಶನೆ ಬಲ್ಲ ಪರಮ ಪಾತಕೀಯಾ ಕಿನ್ನೇಶ ಮುನಿದು vijaya vittala. Show all posts

Thursday, 17 October 2019

ವೆಂಕಟೇಶನೆ ಬಲ್ಲ ಪರಮ ಪಾತಕೀಯಾ ಕಿನ್ನೇಶ ಮುನಿದು ankita vijaya vittala

ವಿಜಯದಾಸ
ವೆಂಕಟೇಶನೆ ಬಲ್ಲ ಪರಮ ಪಾತಕೀಯಾ |
ಕಿನ್ನೇಶ ಮುನಿದು ಬಂದೇನು ಮಾಡುವನು ಪ

ಚಿತ್ತದೊಲ್ಲಭನ ಸಮ್ಮತದಲ್ಲಿ ನಾರಿಯು |
ಅತ್ತವಿತ್ತ ಊರು ಸುತ್ತುತಿರಲು |
ಸುತ್ತಯಿದ್ದ ಬಂಧು ಬಳಗದವರು ಕೂಡಿ |
ಮುತ್ತಿಕೊಂಡು ಅವಳನೇನು ಮಾಡುವರು 1

ಕದ್ದು ತಂದಾ ಒಡವೆ ರಾಜ್ಯವಾಳುವನಿಗೆ |
ತಿದ್ದುವಾ ಸರಿಪಾಲು ಲಂಚಕೊಟ್ಟು |
ಇದ್ದವನು ಹಗಲಿರಳು ಕದ್ದರೆ ಆ ಊರು |
ಎದ್ದು ಹಿಡಿದವರೆಲ್ಲ ಏನು ಮಾಡುವರು2

ತೊತ್ತಿನ ಮೇಲೆ ಒಡೆಯನ ದಯವಿರೆ |
ತೊತ್ತು ಗರ್ತಿಗೆ ಅಂಜಿ ನಡಕೊಂಬಳೆ |
ಕರ್ತು ಶ್ರೀ ವಿಜಯವಿಠ್ಠಲ ವೆಂಕಟೇಶನ |
ಚಿತ್ತದಿ ನೀನಿರೆಯನೆವುಂಟೆ3
**********