RAGA NEELAMBARI
ಬಲವು ಬಲವೆ ನಿನ್ನ ಬಲವಲ್ಲದೆ
ಮಿಕ್ಕ ಬಲಗಳುಂಟೆ ಬಣಗು ಗ್ರಹಗಳಿಂದ ||ಪ||
ಹರಿ ನಿನ್ನ ಕೃಪೆಯೆನಗೆ ಚಂದ್ರ ತಾರಾ ಬಲವು
ಹರಿ ನಿನ್ನ ಕರುಣವೆ ರವಿಯ ಬಲವು
ಹರಿ ನಿನ್ನ ಮೋಹವೇ ಎನಗೆ ಗುರು ಭೃಗು ಬಲವು
ಹರಿ ನಿನ್ನ ಒಲುಮೆಯ ಶನಿಯ ಬಲವು ||
ಮಂಗಳ ಮಹಿಮ ನಿನ್ನ ಅಂಗದರುಶನ ಸುಖದ
ಮಂಗಳನ ಬಲವು ಎನ್ನಂಗಕೆ ಸದಾ
ರಂಗ ನಿನ್ನಯ ಚರಣ ಕಂಗಳಲಿ ನೋಡುವುದು
ಹಿಂಗದೆ ಸುಖವನೀವ ಸೌಮ್ಯ ಬಲವಯ್ಯ ||
ಆದಿಮೂರುತಿ ನಿನ್ನನರಿವುದೇ ರಾಹುಬಲ
ಆದಿಮೂಲನೆ ನಿನ್ನ ಗುಣಕಥನವ
ಆದರಿಸಿ ಕೊಂಡಾಡುತಿಹುದೆನಗೆ ಕೇತುಬಲ
ಆದಿಮಹಿಮನೆ ಮಹಾ ಪುರಂದರವಿಠಲ ||
****
ರಾಗ ಮುಖಾರಿ. ಝಂಪೆ ತಾಳ (raga, taala may differ in audio)
pallavi
balavu balave ninna balavallade mikka balagaLuNTe baNagu grahagaLinda
caraNam 1
hari ninna krpeyenage candra tArA balavu hari ninna karuNave raviya balavu
hari ninna mOhavE enage guru bhrugu balavu hari ninna olumeya shaniya balavu
caraNam 2
mangaLa mahima ninna anga darushana sukhada mangaLana balavu ennangage sadA
ranga ninnaya caraNa kangaLali nODuvudu hingade sukhavanIva saumya balavayya
caraNam 3
Adi mUruti ninnanarivudE rAhu bala Adi mUlane ninna guNakathanava
Adarisi koNDADutihudenage kEtu bala Adi mahimane mahA purandara viTTala
***