ರಾಗ - : ತಾಳ -
ಜಯ ಜಯಾ ಶ್ರೀವೆಂಕಟೇಶ ಜೀಯ ll ಪ ll
ಜಯ ಶ್ರೀವೆಂಕಟೇಶಜೀಯ ನೀನೆ ಅ
ಭಯಪ್ರದಾಯಕನಯ್ಯ ll ಆಹಾ ll
ಭಯಕೃದ್ಭಯನಾಶನ ನೀ ಎನ್ನ ಕೈಬಿಡದೆ
ಕಾಯೊ ಎನ್ನೊಡೆಯನೆ ವೇಂಕಟರಾಯ ll ಅ ಪ ll
ಮಂಕುಮಾನವನಾದ ಎನ್ನ ಮನದ
ಡೊಂಕು ತಿದ್ಧಿದಿ ಸ್ವಪನವನ್ನ ನಿನ್ನ
ಅಂಕಿತದಂತೆ ನುಡಿಸೆನ್ನ ಇನ್ನು
ಮಂಕುಹರಿಸಿದೆ ಪ್ರಸನ್ನ ll ಆಹಾ ll
ಬಿಂಕದಿಂದ ಇಹ ಶಂಕೆ ಹರಿಸಿ ನಿನ್ನ
ಕಿಂಕರ ಕಿಂಕರ ಕಿಂಕರನೆನಿಸಿದೆ ll 1 ll
ಹಿಂದನೇಕ ಪರಿಯಿಂದ ಮನ
ಬಂದಂತೆ ನುಡಿಸಿದ್ದರಿಂದ ತಂದೆ
ಮುದ್ದು ಮೋಹನ ವಿಟ್ಠಲಾನಂದ ಪೊಂದಿ
ಸಂದೇಹ ಹರಿಸಿದ ಚಂದ ll ಆಹಾ ll
ಇಂದು ಮುಂದು ಎಂದೆಂದಿಗೂ ನೀ ಭವ
ಬಂಧ ಹರಿಸಿ ಕಾಯಬೇಕು ಇಂದಿರಾರಮಣ ll 2 ll
ತ್ವರಿತಾದಿ ದಯಮಾಡೋ ಹರಿಯೆ ನೀನೆ
ನಿರುತ ಎನ್ನಯ ಕುಲದ ದೊರೆಯೇ ಭಕ್ತ
ಪರಿಪಾಲ ಮೋಕ್ಷದ ಹರಿಯೇ ನಿನ್ನ
ಹೊರತು ರಕ್ಷಕರ ನಾನರಿಯೆ ll ಆಹಾ ll
ಪರಮಕರುಣಿ ಶ್ರೀ ವೆಂಕಟೇಶಾಭಿನ್ನ
ಉರಗಾದ್ರಿವಾಸವಿಟ್ಠಲ ಜಗದೀಶನೆ ll 3 ll
***