Showing posts with label ಮಾಯಮತವೊಳಿತಲ್ಲ ನಿನಗೆನಾಯಿ ಜನ್ಮವು rangavittala. Show all posts
Showing posts with label ಮಾಯಮತವೊಳಿತಲ್ಲ ನಿನಗೆನಾಯಿ ಜನ್ಮವು rangavittala. Show all posts

Wednesday, 11 December 2019

ಮಾಯಮತವೊಳಿತಲ್ಲ ನಿನಗೆನಾಯಿ ಜನ್ಮವು ankita rangavittala

ಮಾಯಮತವೊಳಿತಲ್ಲ ನಿನಗೆನಾಯಿ ಜನ್ಮವು ಬಾರದೆ ಬಿಡದಲ್ಲ ಪ

ಜಗಕೆ ಕಾರಣ ದೇವ ತಾನಿರಲುಬೊಗಳಿಕೊಂಬೆ ಭೇದವಿಲ್ಲೆಂದುತೆಗೆವನು ಯಮ ಬೆನ್ನ ಚರ್ಮ ಇದುನಗೆಯಲ್ಲ ಕೇಳೋ ತಿಳಿಯೊ ದುಷ್ಕರ್ಮ 1

ಭೇದವಿಲ್ಲೆಂದು ತಿಳಿದು ನೀಮಾದಿಗರ ಮನೆಯಲ್ಲಿ ಉಣಲೊಲ್ಲೆ ಯಾಕೊಸಾಧಿಸಿ ನೋಡಲು ನಿನಗೆ ಇಷ್ಟುಬದುಕುಂಟಾದರು ಉಸುರಲಿನ್ಯಾಕೋ 2

ಅಕ್ಕತಂಗಿಯರಿರಲು ನೀನುರೊಕ್ಕವಿಕ್ಕಿ ಮದುವೆ ಆಗುದ್ಯಾಕೊಚಿಕ್ಕ ತಂಗಿತಾಯಿ ಮೊದಲು ನಿನ್ನಲೆಕ್ಕದಲ್ಲಿ ನೋಡಲು ಒಂದಲ್ಲವೇನೋ3

ಸಂಕರ ಮತಕೆ ನೀ ಹೊಂದಿ ಪಂಕದೊಳು ಬೀಳಬೇಕಲ್ಲೊಸಂಕಟಗೊಳಗಾದಿಯಲ್ಲ ನಿನ್ನಬಿಂಕವ ಮುರಿವರು ಯಮನವರಲ್ಲೊ4

ಇನ್ನಾದರು ಭೇದಮತವನುಚೆನ್ನಾಗಿ ತಿಳಿಯೋ ರಂಗವಿಠಲನುತನ್ನ ದಾಸ್ಯವನು ಕೊಟ್ಟುಉನ್ನತ ಪದವೀವನು ನಿನಗೆ 5
***********