Showing posts with label ಮಾಧವ ಮಧುಸೂದನ ಯಾದವ ಕುಲರನ್ನ purandara vittala. Show all posts
Showing posts with label ಮಾಧವ ಮಧುಸೂದನ ಯಾದವ ಕುಲರನ್ನ purandara vittala. Show all posts

Friday, 6 December 2019

ಮಾಧವ ಮಧುಸೂದನ ಯಾದವ ಕುಲರನ್ನ purandara vittala

ಪುರಂದರದಾಸರು
ರಾಗ ಸಾವೇರಿ ಅಟತಾಳ 

ಮಾಧವ ಮಧುಸೂಧನ ಯಾದವಕುಲರನ್ನ
ಬಾರೆಂದು ಕರೆದಳೆಶೋದೆ ಮುದ್ದಿಸಿ ಮಗನ ||ಪ ||

ಸಂಗಡಿಗರನೆಲ್ಲ ಬಿಟ್ಟು ಬಾರಯ್ಯ ಚೆಲುವ
ಮುಂಗಯ್ಯ ವಾಕು ಬೆರಳ್ಹೊನ್ನುಂಗುರ
ಝಂಗಿಪ ಉಡಿಗೆಜ್ಜೆ ಉಡಿದಾರವ ಕಂಡು
ಅಂಗನೆಯರು ನಿನ್ನನೊಯ್ವರೊ
ಕಂಗಳ ಸಿರಿಯೆ ನೀ ಕಲ್ಪವೃಕ್ಷವೆ
ಎಂದು ಡಿಂಗರಿಗರು ಕಂಡರೆ ಬಿಡರೊ
ನಿನ್ನಂಘರಿ ಮೇಲೆನ್ನ ನೊಸಲನಿಡುವೆ ಕೃಷ್ಣ
ಕಂಗಳ ಸಿರಿಯೆ ಬಾರೊ ಮಗನೆ ||

ಬಾಲಕರೊಡನಾಟ ಸಾಕು ಬಾರಯ್ಯ
ನೀಲಾಂಗ ನಿನ್ನ ಮುತ್ತಿನರಳೆಲೆ
ಕೀಲು ಮಾಗಾಯಿ ಹುಲಿಯುಗುರು ಕಂಡು
ಸೋಲ್ವರೊ ನಿನಗೆ ಸೊಬಗಿಯರು
ಶ್ರೀಲೋಲ ನೀನಾಳಿ ಕಂಸಾಸುರನ ತುಂಬಿದೊ-
ಡ್ಡೋಲಗದೊಳು ರಕ್ಕಸರು ಪಂಥವಾಡಿ
ವೀಳ್ಯವ ಪಿಡಿದು ಕೊಲುವೆನೆಂದು ನಿನ್ನ
ಕಾಲಿಗೆ ಎರಗುವೆ ಬಾರೋ ಮಗನೆ ||

ಬೊಮ್ಮದ ಮರಿಯೆ ವಿಶ್ವನೆಲ್ಲ ಹೃದಯದೊ-
ಳೊಮ್ಮೆ ತೋರುವೆನೆಂದು ಕಂಡು ನಾ ಬಲ್ಲೆ
ಎನ್ನ ಮನಕೆ ಆಹ್ಲಾದನು ಉಪಾಯ-
ದಿಂದ ಭಾಗವತರ ಪಾಲಿಸುತಿಪ್ಪ
ಅಗಮ್ಯಗೋಚರ ಶ್ರೀ ಪುರಂದರವಿಠಲ ತೊರೆ- (ದೊರೆ?)
ದುಮ್ಮಿಯ ಕೊಡುವೆ ಬಾರೆಲೊ ಮಗನೆ ||
***


pallavi

mAdhava madhusUdana yAdava kularanna bArendu karedal yashOde muddisi magana

caraNam 1

sangaDigaranella biTTu bArayya celuva mungayya vAku beraL honnungura
jhangipa uDigejje uDidArava kaNDu anganeyaru ninnanoivaro
kangaLa siriye nI kalpa vrkSave endu Dingarigaru kaNdare biDaro
ninnanghari mElenna nosalaniDuva krSNa kangaLa siriye bAro magana

caraNam 2

bAlakaroDanATa sAku bArayya nIlAnga ninna muttinaLele
kIlu mAgAyi huliyuguru kaNDu sOlvaro ninage sObagiyaru
shrIlOla nInALi kamsAsurana tumbidoDDOlakadoLu rakkasaru bandavADi
vILyava piDidu koluvenendu ninna kAlige eraguve bArO magane

caraNam 3

bommada mariye vishvanella hrdayadoLomme tOruvenendu kaNDu nA balle
enna manake AhlAdanu upAyadinda bhAgavatara pAlisutippa agamya
gOcara shrI purandara viTTala dore dammiya koDuve bArelo magane
***

ಮಾಧವ ಮಧುಸೂದನ ಯಾದವ ಕುಲರನ್ನ ಯ-|ಶೋದೆ ಕರೆದಳು ಬಾರೆಂದು- ಮುದ್ದಿಸಿ ಮಗನ ಪ

ಸಂಗಡಿಗರನೆಲ್ಲ ಬಿಟ್ಟು ಬಾರೈ ಚೆಲುವ |ಮುಂಗೈಯವಾಕು ಬೆರಳ ಹೊನ್ನುಂಗರ ||ಝಂಗಿಪ ಹುರಿಗೆಜ್ಜೆ ಉಡೆದಾರವನು ಕಂಡು |ಅಂಗನೆಯರು ನಿನ್ನನೊಯ್ವರೊ ||ಕಂಗಳ ಸಿರಿಯೆ ನೀ ಕಲ್ಪವೃಕ್ಷವೆ ಎಂದು |ಡಿಂಗರಿಗರು ಕಂಡರೆ ಬಿಡರೊ ನಿ- ||ನ್ನಂಘ್ರಿಯ ಮೇಲೆ ನೊಸಲನಿಡುವೆ ಕೃಷ್ಣ |ಕಂಗಳ ಸಿರಿಯೆ ಬಾರೋ- ರಂಗಯ್ಯ 1

ಬಾಲಕರೊಡನಾಟ ಸಾಕು ಬಾ ಬಾರೈಯ |ನೀಲಾಂಗ ನಿನ್ನ ಮುಂದಲೆ ಮುತ್ತಿನರಳೆಲೆ ||ಕೀಲುಮಾಗಾಯಿ- ಮಾಣಿಕ ಪುಲಿಯುಗರ ಕಂಡು |ಸೋಲ್ವರೊ ನಿನಗೇಸೋ ಸೋಗೆಯರು ||ಶ್ರೀಲೋಲ ನಿನ್ನಲಿ ಕಂಸನ ತುಂಬಿದೊ-|ಡ್ಡೋಲಗದೊಳು ರಕ್ಕಸರು ಪಂಥವನಾಡೆ ||ವೀಳ್ಯವ ಪಿಡಿದೆ ಕೊಲುವೆನೆಂದು ನಿನ್ನಯ |ಕಾಲಿಗೆ ಎರಗುವೆ ಬಾರೊ-ರಂಗಯ್ಯ 2

ಬೊಮ್ಮದ ಮರಿಯೆ ವಿಶ್ವವನೆಲ್ಲ ಹೃದಯದೊ-|ಳೊಮ್ಮೆ ತೋರುವನೆಂದು ಕಂಡು ನಾ ಬಲ್ಲೆ ||ಎಮ್ಮ ಮನಕೆ ಅಹಲ್ಲಾದನು ನೀನೆ |ಉಮ್ಮಯದಿಂ ಭಾಗವತರ ಪಾಲಿಸುತಿಪ್ಪ-||ಗಮ್ಯಗೋಚರ ಸಿರಿಪುರಂದರವಿಠಲ ತೊರೆ-|ದಮ್ಮೆಯ ಕೊಡುವೆನು ಬಾರೋ-ರಂಗಯ್ಯ 3
********