Showing posts with label ಹೀಂಗ್ಯಾಕ ಪ್ರಾಣಿ ಹೀನ ಗುಣಗಳನೆಬಿಡಲಿಲ್ಲ jnanabodha. Show all posts
Showing posts with label ಹೀಂಗ್ಯಾಕ ಪ್ರಾಣಿ ಹೀನ ಗುಣಗಳನೆಬಿಡಲಿಲ್ಲ jnanabodha. Show all posts

Thursday 5 August 2021

ಹೀಂಗ್ಯಾಕ ಪ್ರಾಣಿ ಹೀನ ಗುಣಗಳನೆಬಿಡಲಿಲ್ಲ ankita jnanabodha

 ..

ಹೀಂಗ್ಯಾಕ ಪ್ರಾಣಿ | ಹೀನ ಗುಣಗಳನೆಬಿಡಲಿಲ್ಲ | ಶ್ರೀ ಗುರುವಿನಾಶೆಯ ಮಾಡಲಿಲ್ಲ ಪ


ವಿವೇಕವ ತೊಡಲಿಲ್ಲ ಅ-ವಿವೇಕವ ಸುಡಲಿಲ್ಲ |ಸಾವಧಾನದಿ ಮನವಿಡಲಿಲ್ಲ 1

ಆಚಾರವ ಕೊಳಲಿಲ್ಲಮತ್ಸರವ ಮರೆಯಲಿಲ್ಲಸಚ್ಚಿದಾನಂದ ಸುಖ ಉಣಲಿಲ್ಲ 2

ಈ ನಡತೀ ತರಹವಜಾಣನಾದವನೇ ಬಲ್ಲ |ಜ್ಞಾನಬೋಧನು ಸಾರಿದ ಸೊಲ್ಲ 3

***