Showing posts with label ಜಯ ದೇವಿ ತನಯಗೆ ಮಂಗಳಂ ವಯನ ಪ್ರದಾತೆಗೆ ಶುಭ ಮಂಗಳಂ shyamasundara. Show all posts
Showing posts with label ಜಯ ದೇವಿ ತನಯಗೆ ಮಂಗಳಂ ವಯನ ಪ್ರದಾತೆಗೆ ಶುಭ ಮಂಗಳಂ shyamasundara. Show all posts

Wednesday, 1 September 2021

ಜಯ ದೇವಿ ತನಯಗೆ ಮಂಗಳಂ ವಯನ ಪ್ರದಾತೆಗೆ ಶುಭ ಮಂಗಳಂ ankita shyamasundara

 ..

ಜಯದೇವಿ ತನಯಗೆ ಮಂಗಳಂ

ವಯನ ಪ್ರದಾತೆಗೆ ಶುಭ ಮಂಗಳಂ

ಯುಗ ಯುಗದಿ ಪುಟ್ಟಿ | ಜಿಗಿದು ಗಗವ ಮೆಟ್ಟಿ

ಹಗಲೊಡೆಯನ ಫಲ ಬಗೆಯ ಬಕ್ಷಿಸಿ

ಮಿಗೆ ಭಕುತಿಲಿಂದ ರಘುಪನೊಲಿಸಿನಾ

ಲ್ಮೊಗನ ಪದವಿ ಪಡೆದ ಸುಗುಣ ನಿಧಿಗೆ 1


ಪುನಃ ದ್ವಾಪರದಲ್ಲಿ ಇನಜನ ತನುಜಗೆ

ಅನುಜನೆಂದೆನಿಸಿ ಹರಿಯಾಜ್ಞೆಯಿಂದಲಿ

ಮಣಿಮಂತ ಮೊದಲಾದ ದನುಜರ ಗಣವೆಲ್ಲ

ರಣದೊಳು ಹಣಿದಂಧ ಘವವೀರನೆ 2


ಬಂದು ಭೂಮಿಯಲ್ಲಿ ಮಧ್ಯಮಂದಿರ ನಂದನನಾಗಿ

ಮಂದ ಮಾಯ್ಗಳ ಮತ ಖಂಡಿಸುತಲಿ

ಶಿಂಧುತೀರದಿ ಮೆರೆವ ಇಂದುಕ್ಷೇತ್ರದಿ ಶಾಮ

ಸುಂದರ ಸ್ಥಾಪಿಸಿದಾನಂದಮುನಿಗೆ 3

***