Wednesday, 1 September 2021

ಜಯ ದೇವಿ ತನಯಗೆ ಮಂಗಳಂ ವಯನ ಪ್ರದಾತೆಗೆ ಶುಭ ಮಂಗಳಂ ankita shyamasundara

 ..

ಜಯದೇವಿ ತನಯಗೆ ಮಂಗಳಂ

ವಯನ ಪ್ರದಾತೆಗೆ ಶುಭ ಮಂಗಳಂ

ಯುಗ ಯುಗದಿ ಪುಟ್ಟಿ | ಜಿಗಿದು ಗಗವ ಮೆಟ್ಟಿ

ಹಗಲೊಡೆಯನ ಫಲ ಬಗೆಯ ಬಕ್ಷಿಸಿ

ಮಿಗೆ ಭಕುತಿಲಿಂದ ರಘುಪನೊಲಿಸಿನಾ

ಲ್ಮೊಗನ ಪದವಿ ಪಡೆದ ಸುಗುಣ ನಿಧಿಗೆ 1


ಪುನಃ ದ್ವಾಪರದಲ್ಲಿ ಇನಜನ ತನುಜಗೆ

ಅನುಜನೆಂದೆನಿಸಿ ಹರಿಯಾಜ್ಞೆಯಿಂದಲಿ

ಮಣಿಮಂತ ಮೊದಲಾದ ದನುಜರ ಗಣವೆಲ್ಲ

ರಣದೊಳು ಹಣಿದಂಧ ಘವವೀರನೆ 2


ಬಂದು ಭೂಮಿಯಲ್ಲಿ ಮಧ್ಯಮಂದಿರ ನಂದನನಾಗಿ

ಮಂದ ಮಾಯ್ಗಳ ಮತ ಖಂಡಿಸುತಲಿ

ಶಿಂಧುತೀರದಿ ಮೆರೆವ ಇಂದುಕ್ಷೇತ್ರದಿ ಶಾಮ

ಸುಂದರ ಸ್ಥಾಪಿಸಿದಾನಂದಮುನಿಗೆ 3

***

No comments:

Post a Comment