Wednesday, 1 September 2021

ನಿನ್ನ ಮನ ಬಂದಂತೆ ವಿಹರಿಸೊ ಸಿರಿಕೃಷ್ಣ ಎನ್ನ ಸ್ವಾಮಿ ನೀ ಎಂದು ಮರುಳಾದೆನಲ್ಲದೆ ankita vasudeva vittala

 ..

kruti by ವ್ಯಾಸತತ್ವಜ್ಞ ತೀರ್ಥರು vyasatatwajna teertharu 


ನಿನ್ನ ಮನ ಬಂದಂತೆ ವಿಹರಿಸೊ ಸಿರಿಕೃಷ್ಣ

ಎನ್ನ ಸ್ವಾಮಿ ನೀ ಎಂದು ಮರುಳಾದೆನಲ್ಲದೆ ಪ


ಬೊಮ್ಮ ಮೊದಲು ಸುರೋತ್ತಮದ ಪಾದ

ಧುಮ್ಮಿನೊಳು ಮುಳುಗಿಹೆ ಎಮ್ಮಯ್ಯ ಕೇಳು 1


ಸರ್ವಜ್ಞನೆಂಬಿಯಾ ಉರ್ವಿಯ ಪತಿಗಳು

ಸರ್ವ ಜನಗಳಾ ಪೆÀೂರ್ವರೆ ಕಂಡೀಗ2


ಅಕ್ಷೀಣ ಶಕುತೆಂಬ ದಾಕ್ಷಿಣ್ಯವಿಲ್ಲದೆ

ಸುಕ್ಷೀಣ ಜನರನ್ನು ರಕ್ಷಿಪರಯ್ಯ 3


ಭಕುತ ವತ್ಸಲನೆಂಬೊ ಭಕುತಿಯು ಎನ್ನಲ್ಲೆ

ಯುಕುತವಾಗಿಹವು ವ್ಯಕತ ನಿನಗಲ್ಲವೆ 4


ಶರಣರ ದೊರೆಯೆಂದು ಕರುಣ ಮಾಡುವೆನೆಂಬ

ಸಿರಿ ವಾಸುದೇವವಿಠಲ ಕರುಣಿಸಾಲಸ್ಯವ್ಯಾಕೊ 5

***


No comments:

Post a Comment