Audio by Mrs. Nandini Sripad
ಧ್ರುವತಾಳ
ಪೊಂದಿ ಭಜಿಸು ಸತತ | ಒಂದೇ ಮನದಿ ಸ್ತಂಭ
ಮಂದಿರ ಮಾನವಿ ದಾಸಾರ್ಯರ ಪ
ಮಂದ ಮಾನವ ಕೇಳೋ | ವಂದಿಸಿ ಸೇವಿಪರ
ಬಂಧನ ಪರಿಹರಿಸಿ ಮನದಾಭೀಷ್ಟ
ತಂದು ಕೊಡುವದಕ್ಕೆ | ಮಂದಾರ ಕುಜದಂತೆ
ಬಂದಿಲ್ಲಿ ನಿಂದಿಹ್ಯರೆಂದು ತಿಳಿಯೊ
ಛಂದಾಗಿ ಇವರು ದಯದಿ | ಕಣ್ಣೆರದು ನೋಡಿದರೆ
ಬೆಂದು ಪೋಪವು ದೋಷ ವೃಂದವೆಲ್ಲ
ಕಂದನು ಮಾಡಿದ ಕುಂದು ಕ್ಷಮಿಸಿ ತಾಯಿ
ತಂದೆ ಸಕಹುವಂತೆ ರಕ್ಷಿಸುವರೊ
ಹಿಂದೆ ಸಹ್ಲಾದ ಶಲ್ಯನೆಂದೆನಿಸುತ ಪು |
ರಂದರಗುರು ಸ್ವಾದಿರಾಜರ ಪ್ರೀತ
ಸಿಂಧುವರದ ಶಾಮಸುಂದರನಾಜ್ಞದಿ
ಇಂದುವಿನಂತೆ ಮೂಡಿ ಪುನಃ ಜಗದಿ||1||
ಮಟ್ಟತಾಳ
ತ್ವರವಾಡದಿ ಜನಿಸಿ | ವರದೇಂದ್ರನೊಲಿಸಿ
ಮರುತಾಗಮ ಗಳಿಸಿ | ತುರುಕ್ಷಕದಾಸ
ವರಿಯರ ಕರುಣದಲಿ | ಶರಧಿಜ ಭಾಗದಲಿ ಧರಣಿಪ ವಿಠಲೆಂಬ
ಸುರಚಿರದಂಕಿತವ | ದೊರಕಿಸಿ ಪ್ರಾಕೃತದಿ
ಕರುಣಾಕರ ಶಾಮಸುಂದರನೊರಣಿಸಿದ
ಪರಮಭಾಗವತರ ನೆರೆನಂಬೊ ನಿರುತ ||2||
ತ್ರಿವಿಡತಾಳ
ಇವರ ಸಂದರುಶನ ಭವಬಂಧ ಮೋಚನ
ಇವರ ಸಂದÀರುಶನ ಭವಬಂಧಮೋಚನ
ಇವರ ಚರಣ ಧ್ಯಾನ ಗಂಗಾಸ್ನಾನ
ಇವರನ ಸಾರಿದರೆ ಜವನ ಅಂಜಿಕೆಯಿಲ್ಲ
ಇವರ ಕವನ ಸ್ತವನ ಶ್ರವಣದಿಂದ
ಪವನ ಸಚ್ಚ್ಯಾಸ್ತ್ರ ಪ್ರವಚನ ಫಲವಕ್ಕು
ಇವರಿದ್ದ ಸ್ಥಳ ಕಾಶಿ ರಾಮೇಶ್ವರ
ಇವರಲ್ಲಿ ಸಮಸ್ತ ದಿವಿಜರು ನೆಲೆಸಿದ್ದು
ಇವರಂದ ವಚನವ ನಡೆಸುವರು
ಇವರಲ್ಲಿರಲು ಬಿಟ್ಟು ಅವನಿಸುತ್ತಿದರವಗೆ
ಲವಲೇಶವಾದರು ಪುಣ್ಯವಿಲ್ಲ
ಇವರನುಗ್ರಹವಾಗೆ ಶ್ರೀ ಶಾಮಸುಂದರನು
ತವಕದಿ ಕೈಪಿಡಿದು ಸಲಹುವ ಸರ್ವದ ||3||
ಅಟ್ಟತಾಳ
ಧಾರುಣಿ ಸುರರ | ಉದ್ಧಾರಗೋಸುಗವಾಗಿ |
ಮೂರೆಂಟು ಈರಾರು ಚಾರುಲಕ್ಷಣವುಳ್ಳ |
ಭಾರತಿಪತಿಯಂತೆ ತೋರುವ ಕಾಯುವ
ಶೌರಿ ಕಥಾಮೃತ ಸಾರ ಸುಗ್ರಂಥವಾ
ತಾ ರಚಿಸಿದ ಉಪಕಾರವು ವರ್ಣಿಸ
ಲಾರಿಂದ ಸಾಧ್ಯವು | ಪಾರಾಯಣ ಪ್ರತಿ
ವಾರ ಬಿಡದೆ ಮಾಡೆ ಸಾರಲೇನು | ಸಂ
ಸಾರ ಶರಧಿಯಿಂದ ಪಾರಾಗಿ ಸದ್ಭಕುತಿ
ಪಾರಮಾರ್ಥಜ್ಞಾನ ವೈರಾಗ್ಯ ಪಡೆವ್ರತ
ನಾರದ ನಮಿತ ಶ್ರೀ ಶಾಮಸುಂದರನ ಹೃ
ದ್ವಾರಿಜದೊಳು ಕಂಡು ಸೂರೆಗೊಂಬ ಸುಖ ||4||
ಆದಿತಾಳ
ಈತನ ಭಜಿಸಲು | ಯಾತನೆಗಳು ಇಲ್ಲ
ಈತನ ಸೇರಲು | ಯಾತರ ಭೀತಿಯು
ಈತನ ಹೊರತಿನ್ನು | ದಾತರೆ ನಮಗಿಲ್ಲ
ಈತನೆ ರಕ್ಷಕ | ಈತನೆ ತಂದೆ ತಾಯಿ
ಈತನೆ ಸದ್ಗುರು | ಈತನೆ ಗತಿಪ್ರದ
ಈತನು ಮೂಕಗೆ | ಮಾತು ನುಡಿಸಿದಾತ
ಈತನ ಭಕುತಿಗೆ | ಸೋತು ಎರಡುವ್ಯಾಳ್ಯ
ವಾತಾಂತರ್ಗತ ನಮ್ಮ ಶಾಮಸುಂದರವಿಠಲ
ಪ್ರೀತಿಯಿಂದಿವರಿಗೆ ಮೃಷ್ಟಾನ್ನ ಉಣಿಸಿದ ||5||
ಜತೆ
ಈ ಮಹಾಮಹಿಮರ ಪ್ರೇಮ ಪಡೆದವರನ್ನು
ಶಾಮಸುಂದರಸ್ವಾಮಿ ಸತತ ಪೊರೆವ ||6||
******
ಶ್ರೀ ಜಗನ್ನಾಥದಾಸರಾಯರ ಸ್ತೋತ್ರ ಸುಳಾದಿ
ರಾಗ ಹಂಸಧ್ವನಿ
ಧ್ರುವತಾಳ
ಪೊಂದಿ ಭಜಿಸು ಸತತ ಒಂದೇ ಮನದಿ ಸ್ಥಂಭ
ಮಂದಿರ ಮಾನವಿ ದಾಸಾರ್ಯರ
ಮಂದ ಮಾನವ ಕೇಳೋ ವಂದಿಸಿ ಸೇವಿಪರ
ಬಂಧನ ಪರಿಹರಿಸಿ ಮನದಭೀಷ್ಟ
ತಂದು ಕೊಡುವದಕ್ಕೆ ಮಂದಾರ ಕುಜದಂತೆ
ಬಂದಿಲ್ಲಿ ನಿಂದಿಹ್ಯರೆಂದು ತಿಳಿಯೊ
ಛಂದಾಗಿ ಇವರು ದಯದಿ ಕಣ್ದೆರೆದು ನೋಡಿದರೆ
ಬೆಂದು ಪೋಪವು ದೋಷ ವೃಂದವೆಲ್ಲ
ಕಂದನು ಮಾಡಿದ ಕುಂದು ಕ್ಷಮಿಸಿ ತಾಯಿ
ತಂದೆ ಸಲಹುವರಂತೆ ರಕ್ಷಿಸುವರೊ
ಹಿಂದೆ ಸಲ್ಹಾದ ಶಲ್ಯರೆಂದೆನಿಸುತ ಪು - |
ರಂದರಗುರು ಸ್ವಾದಿರಾಜರ ಪ್ರೀತ
ಸಿಂಧೂರವರದ ಶ್ಯಾಮಸುಂದರ ನಾಜ್ಞದಿ
ಇಂದುವಿನಂತೆ ಮೂಡಿ ಪುನಃ ಜಗದಿ || 1 ||
ಮಟ್ಟತಾಳ
ತ್ವರವಾಟದಿ ಜನಿಸಿ ವರದೇಂದ್ರರನೊಲಿಸಿ
ಮರುತಾಗಮ ಗಳಿಸಿ ತುರುರಕ್ಷಕ ದಾಸ -
ವರ್ಯರ ಕರುಣದಲಿ ಶರಧಿಜ ಭಾಗದಲಿ
ಧರಣಿಪ ವಿಠಲೆಂಬೋ ಸುರಚರದಂಕಿತವ |
ದೊರಕಿಸಿ ಪ್ರಾಕೃತದಿ ಕರುಣಾಕರ ಶ್ಯಾಮಸುಂದರನ
ವರ್ಣಿಸಿದ ಪರಮ ಭಾಗವತರ ನೆರೆನಂಬು ನಿರುತ || 2 ||
ತ್ರಿವಿಡತಾಳ
ಇವರ ಸಂದರುಶನ ಭವ ಬಂಧ ಮೋಚನ
ಇವರ ಚರಣ ಧ್ಯಾನ ಗಂಗಾ ಸ್ನಾನ
ಇವರನ್ನ ಸಾರಿದರೆ ಜವನ ಅಂಜಿಕೆಯಿಲ್ಲ
ಇವರ ಕವನ ಸ್ತವನ ಶ್ರವಣದಿಂದ
ಪವನ ಸಚ್ಚಾಸ್ತ್ರದ ಪ್ರವಚನ ಫಲವಕ್ಕು
ಇವರಿದ್ದ ಸ್ಥಳ ಕಾಶಿ ರಾಮೇಶ್ವರ
ಇವರಲ್ಲಿ ಸಮಸ್ತ ದಿವಿಜರು ನೆಲೆಸಿದ್ದು
ಇವರಂದ ವಚನವ ನಡೆಸುವರು
ಇವರಲ್ಲಿರಲು ಬಿಟ್ಟು ಅವನಿ ಸುತ್ತಿದರವಗೆ
ಲವಲೇಶವಾದರು ಪುಣ್ಯವಿಲ್ಲ
ಇವರನುಗ್ರಹವಾಗೆ ಶ್ರೀಶಾಮಸುಂದರನು
ತವಕದಿ ಕರಪಿಡಿದು ಸಲಹುವ ಸಂತತ || 3 ||
ಅಟ್ಟತಾಳ
ಧಾರುಣಿ ಸುರರ ಉದ್ಧಾರಗೋಸುಗವಾಗಿ |
ಮೂರೆಂಟು ಈರಾರು ಚಾರುಲಕ್ಷಣವುಳ್ಳ |
ಭಾರತಿಪತಿಯಂತೆ ತೋರುವ ಕಾಯುವ
ಶೌರಿ ಕಥಾಮೃತ ಸಾರ ಸುಗ್ರಂಥವಾ
ತಾ ರಚಿಸಿದ ಉಪಕಾರವು ವರ್ಣಿಸಲಾರಿಂದಸಾಧ್ಯವು |
ಪಾರಾಯಣ ಪ್ರತಿವಾರ ಬಿಡದೆ ಮಾಡೆ ಸಾರಲೇನು | ಸಂ
ಸಾರ ಶರಧಿಯಿಂದ ಪಾರಾಗಿ ಸದ್ಭಕುತಿ
ಪಾರಮಾರ್ಥಿಕ ಜ್ಞಾನ ವೈರಾಗ್ಯ ಪಡೆವುತ
ನಾರದ ನಮಿತ ಶ್ರೀ ಶಾಮಸುಂದರನ ಹೃ -
ದ್ವಾರಿಜದೊಳು ಕಂಡು ಸೂರೆಗೊಂಬುವ ಸುಖ || 4 ||
ಆದಿತಾಳ
ಈತನ ಭಜಿಸಲು ಯಾತನೆಗಳು ಇಲ್ಲ
ಈತನ ಸೇರಲು ಯಾತರ ಭೀತಿಯು
ಈತನ ಹೊರತಿನ್ನು ದಾತರು ನಮಗಿಲ್ಲ
ಈತನೆ ರಕ್ಷಕ ಈತನೆ ತಾಯ್ತಂದೆ
ಈತನೆ ಸದ್ಗುರು ಈತನೆ ಗತಿಪ್ರದ
ಈತನೆ ಮೂಕಗೆ ಮಾತು ನುಡಿಸಿದಾತ
ಈತನ ಭಕ್ತಿಗೆ ಸೋತು ಎರಡುವ್ಯಾಳೆ
ವಾತಾಂತರ್ಗತ ನಮ್ಮ ಶಾಮಸುಂದರವಿಠಲ
ಪ್ರೀತಿಯಿಂದಿವರಿಗೆ ಮೃಷ್ಟಾನ್ನ ಉಣಿಸಿದ || 5 ||
ಜತೆ
ಈ ಮಹಾಮಹಿಮರ ಪ್ರೇಮ ಪಡೆವರನ್ನ
ಶಾಮಸುಂದರವಿಠ್ಠಲ ಸ್ವಾಮಿ ಸತತ ಪೊರೆವ ॥
************