Showing posts with label ನಿನ್ನ ಮಹಿಮೆಯನು ಪೊಗಳುವರೆ purandara vittala. Show all posts
Showing posts with label ನಿನ್ನ ಮಹಿಮೆಯನು ಪೊಗಳುವರೆ purandara vittala. Show all posts

Friday, 6 December 2019

ನಿನ್ನ ಮಹಿಮೆಯನು ಪೊಗಳುವರೆ purandara vittala

ರಾಗ ಸೌರಾಷ್ಟ್ರ ಆದಿತಾಳ 

ನಿನ್ನ ಮಹಿಮೆಯನು ಪೊಗಳುವರೆ
ಎನ್ನಳವಲ್ಲ ವಿಚಿತ್ರಚರಿತ್ರ ||ಪ ||

ಪಾಲುಗಡಲು ಮನೆಯಾಗಿರಲು ಒಂ-
ದಾಲದೆಲೆಯ ಮೇಲೆ ಮಲಗುವರೆ
ಮೂಲೋಕವು ನಿನ್ನ ಉದರದೊಳಿರುದಿರೆ
ಬಾಲಕನಾಗಿ ಎತ್ತಿಸಿಕೊಂಬರೆ ||

ಸಿರಿ ನಿನ್ನ ಕೈವಶವಾಗಿರಲು ನೀ
ತಿರಿವರೆ ಬಲಿಯ ದಾನಕೆ ಪೋಗಿ
ಸರಸಿಜೋದ್ಭವ ನಿನ್ನ ಪೂಜೆಯ ಮಾಡಲು
ನರನ ಬಂಡಿಗೆ ಬೋವನಾಗುವರೆ ||

ಕಮ್ಮಂಗೋಲನ ಪಿತನಾಗಿರಲು
ಗಮ್ಮನೆ ಕುಬುಜೆಗೆ ಸೋಲುವರೆ
ಬೊಮ್ಮನಯ್ಯನೆ ಪರಬೊಮ್ಮನೆಂದೆನಿಸುವ
ಹ(/ಅ?)ಮ್ಮಿನ ದೇವರ ಗಂಡ ಪುರಂದರವಿಠಲ ||
***

pallavi

ninna mahimeyanu pogaLuvare ennaLavalla vicitra caritra

caraNam 1

pAlu kaDalu maneyoLagiralu ondAladelaya mEle malaguvare
mU lOkavu ninna udaradoLirudire bAlakanAgi ettisi kombare

caraNam 2

siri ninna kai vashavAgiralu nI tirivare baliya yAgake pOgi
sarasijOdbhava ninna pUjeya mADalu narana baNDige bOvanAguvare

caraNam 3

kammangOlana pitanAgiralu gammane kubujage sOluvare
bommanayyane parabommanendenisuva hammina dEvara gaND purandara viTTala
***