Showing posts with label ಪುಂಡಲೀಕ ದಳ ನಯನ ಪುಂಡಲೀಕ ವರದ ವಿಠಲ ನಿಮ್ಮ achalananda vittala. Show all posts
Showing posts with label ಪುಂಡಲೀಕ ದಳ ನಯನ ಪುಂಡಲೀಕ ವರದ ವಿಠಲ ನಿಮ್ಮ achalananda vittala. Show all posts

Saturday, 1 May 2021

ಪುಂಡಲೀಕ ದಳ ನಯನ ಪುಂಡಲೀಕ ವರದ ವಿಠಲ ನಿಮ್ಮ ankita achalananda vittala

 ರಾಗ : ಕಾಂಬೋಧಿ   ತಾಳ : ಆದಿ 


ಪುಂಡಲೀಕ ದಳ ನಯನ ।

ಪುಂಡಲೀಕ ವರದ ವಿಠಲ ನಿಮ್ಮ ।

ಕೊಂಡಾಡಲಳವೆ ಪಾಂಡುರಂಗರಾಯ ।। ಪಲ್ಲವಿ ।।


ಹದಿನಾಲ್ಕು ಲೋಕವನ್ನು ನಿನ್ನ ।

ಉದರದಲ್ಲಿ ತಾಳಿದಂಗೆ ।

ಸುದತಿ ರುಕ್ಮಿಣಿ ತನ್ನ ಕುಚಗಳಿಂದ ।

ಚದುರೆ ನಿನ್ನ ಎತ್ತಿ ಕುಣಿದ ।

ಪದುಮಾಕ್ಷಿ । ಬ ।

ಲ್ಲಿದಳೋ ನೀ ಬಲ್ಲಿದನೋ ।। ಚರಣ ।।


ಭೂಮಿ ಈರಡಿ ಮಾಡಿ ।

ವ್ಯೋಮಕೊಂದು ಪದವಿತ್ತೇ ।

ರೋಮ ರೋಮದಲಿ ಬ್ರಹ್ಮರುದ್ರರಿರಲು ।

ಸ್ವಾಮಿ ನಿನ್ನ ಪ್ರೆಮ್ಮ ತಾಳ್ದ ।

ಕೋಮಲಾಂಗಿ ಬಲ್ಲಿದಳೋ 

ನೀ ಬಲ್ಲಿದನೋ ।। ಚರಣ ।।


ಶೃಂಗಾರವಾದ ನಿನ್ನ ।

ಮಂಗಳ ಶ್ರೀಪಾದವನ್ನು ।

ಹಿಂಗದೆ ಭಜಿಸುವ ಸಲಿಗೆಯಿತ್ತೆಯೋ ।

ರಂಗಾ ಅಚಲಾನಂದವಿಠಲ ನಿನ್ನ ।

ಸಂಗ ಸುಖಿ ಬಲ್ಲಿದಳೋ ।

ನೀ ಬಲ್ಲಿದೆಯೋ ।। ಚರಣ ।।

****