Audio by Mrs. Nandini Sripad
ಶ್ರೀ ಬಾದರಾಯಣವಿಠ್ಠಲರ ಕೃತಿ
ರಾಗ ಕೇದಾರಗೌಳ ಖಂಡಛಾಪುತಾಳ
ಅಪ್ಪ ನಿನ್ನಲಿ ಭಕುತಿ ಪಾಲಿಸಪ್ಪ ॥ ಪ ॥
ಬಪ್ಪ ದುರಿತಗಳೆಲ್ಲ ಪರಿಹರಿಸು ನಮ್ಮಪ್ಪ ॥ ಅ ಪ ॥
ಇಭರಾಮಪುರದರಸ ಈಪ್ಸಿತ ಫಲಪ್ರದ ।
ತ್ರಿಭುವನ್ವ್ಯಾಪ್ತಿ ಸಿರಿವಿಷ್ಣುದರ್ಶಿ ॥
ಅಬುಜದಳನಯನ ಆನತ ಜನೋದ್ಧಾರ ।
ಗುಣನಿಬಿಡ ನಿರ್ದೋಷ ನಿರುಪಮ ದಯಾಸಾಂದ್ರ ॥ 1 ॥
ಅನ್ನ ಭೂ ಗೋ ವಸ್ತ್ರ ಕನ್ಯಾ ಧನ ಜ್ಞಾನ ।
ಘನ್ನಭಕ್ತಿ ವಿರಕ್ತಿ ನೀಡುವರೊಳು ॥
ಇನ್ನು ನಿನಗೆಣೆಗಾಣೆ ಪುಣ್ಯಪುರುಷ ಪುನೀತ ।
ಪೂರ್ಣಕಾರುಣ್ಯಗುಣ ನಿರ್ದೋಷ ವೇಷ ॥ 2 ॥
ಕಲಿಮಲವಿದೂರ ಕಲ್ಯಾಣಗುಣ ಗಂಭೀರ ।
ಜಲಜನಿಭಗಾತ್ರ ಸುಜನಾಬ್ಜಮಿತ್ರ ॥
ಖಳವಿಪಿನದಾವ ಶುಭಸತ್ವ ಸ್ವಭಾವ ।
ಸಿರಿಲಲನೇಶ ಬಾದರಾಯಣವಿಠ್ಠಲ ನ ನಿಜನಿಲಯ ॥ 3 ॥
********