ಕಾಖಂಡಕಿ ಶ್ರೀ ಮಹಿಪತಿರಾಯರು
ಕರುಣಿಸೊ ಗುರು ತಾರಿಸೊ ಶರಣರಕ್ಷಕ ನಮ್ಮ ಕರುಣಾಕರ ದೇವ ಪ
¨Àವಜನ್ಮದಲಿ ಬಂದು ಬಹುಬಳಲಿದೆ ನಾನು ಅವಿದ್ಯದಾಟಕೆ ಐವರು ಕೂಡಿ ತಾ ಜೀವನ ಮುಕ್ತಿಗಾಣಿಸಗೊಡದಿಹರು 1
ಮೂರೊಂದು ಮಂದಿಯು ಸೇರಗೊಡದೆ ಪಥ ಆರುಮಂದಿಯ ಕೂಡಿ ಕಾಡುತಲಿ ಆರು ಮತ್ತೆರಡುಮಂಡೆಯ ಕಾವಲಿಗೆ ನಾನು ಆರೆನಯ್ಯ ಶ್ರೀಗುರುಶಿರೋಮಣಿಯೆ 2
ಹತ್ತು ಹೊಳಿಯು ಸುತ್ತ ಅಡ್ಡಗಟ್ಟಿಹುದು ಪಥ ನಡಲೀಸದೆ ಇಂತಿವ ತಾರಿಸಿ ಮೂಢsÀಮಹಿಪತಿಯ ಸಂತತ ಸದ್ಗತಿಸುಖ ಈವುದೆನಗಿನ್ನು 3
***