Wednesday, 1 September 2021

ಕರುಣಿಸೋ ಗುರು ತಾರಿಸೊ ಶರಣರಕ್ಷಕ ನಮ್ಮ ಕರುಣಾಕರ ದೇವ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಕರುಣಿಸೊ ಗುರು ತಾರಿಸೊ ಶರಣರಕ್ಷಕ ನಮ್ಮ ಕರುಣಾಕರ ದೇವ ಪ  


¨Àವಜನ್ಮದಲಿ ಬಂದು ಬಹುಬಳಲಿದೆ ನಾನು ಅವಿದ್ಯದಾಟಕೆ ಐವರು ಕೂಡಿ ತಾ ಜೀವನ ಮುಕ್ತಿಗಾಣಿಸಗೊಡದಿಹರು 1 

ಮೂರೊಂದು ಮಂದಿಯು ಸೇರಗೊಡದೆ ಪಥ ಆರುಮಂದಿಯ ಕೂಡಿ ಕಾಡುತಲಿ ಆರು ಮತ್ತೆರಡುಮಂಡೆಯ ಕಾವಲಿಗೆ ನಾನು ಆರೆನಯ್ಯ ಶ್ರೀಗುರುಶಿರೋಮಣಿಯೆ 2 

ಹತ್ತು ಹೊಳಿಯು ಸುತ್ತ ಅಡ್ಡಗಟ್ಟಿಹುದು ಪಥ ನಡಲೀಸದೆ ಇಂತಿವ ತಾರಿಸಿ ಮೂಢsÀಮಹಿಪತಿಯ ಸಂತತ ಸದ್ಗತಿಸುಖ ಈವುದೆನಗಿನ್ನು 3

***


No comments:

Post a Comment