ಮಂಗಳಂ ಜಯ ಮಂಗಳಂ ll ಪ ll
ಶುಭಮಂಗಳಂ ಮಧ್ವೇಶ ಕೃಷ್ಣಯ್ಯಗೆ ll ಅ ಪ ll
ವಿಕಸಿತ ನಯನಗೆ ವಿಶ್ವ ಕುಟುಂಬಿಗೆ l
ಸಕಲ ಲೋಕವನೆಲ್ಲಾ ಸಲಹುವಗೆ l
ಅಖಿಳ ಜೀವರೊಳಿದ್ದು ವ್ಯಾಪಾರ ಮಾಡುವ l
ಲಕುಮಿವಲ್ಲಭ ಸದಾ ಸುಖಪೂರ್ಣಗೆ ll 1 ll
ರಕ್ಕಸ ಹರಣಗೆ ರತಿಪತಿ ಜನಕಗೆ l
ಅಕ್ಕರದಿಂದಲಿ ಭಕುತರ ಪಾಲಗೆ l
ಮಕ್ಕಳಾಟಿಕೆಯಿಂದ ಮೋಹಿಪ ಜಗವನು l
ರುಕ್ಮಿಣಿಪತಿಯಾದ ರೂಪನಿಗೆ ll 2 ll
ವನಜಸಂಭವನೈಯ್ಯ ವಾಸಿಷ್ಠಋಷಿ ಕಾಯನೆನಿಸುವ l
ಗುಣಪೂರ್ಣ ಗೋವಿಂದಗೆ l
ಜನನಿಗಾಟವ ತೋರಿ ಜಯವಂತನಾಗಿಹ l
ಘನ ವೇಣುಗೋಪಾಲವಿಟ್ಠಲಯ್ಯಗೆ ll 3 ll
***