Tuesday, 13 April 2021

ಮಂಗಳಂ ಜಯ ಮಂಗಳಂ ಶುಭಮಂಗಳಂ ಮಧ್ವೇಶ ankita venugopala vittala

 ಮಂಗಳಂ ಜಯ ಮಂಗಳಂ ll ಪ ll


ಶುಭಮಂಗಳಂ ಮಧ್ವೇಶ ಕೃಷ್ಣಯ್ಯಗೆ ll ಅ ಪ ll


ವಿಕಸಿತ ನಯನಗೆ ವಿಶ್ವ ಕುಟುಂಬಿಗೆ l

ಸಕಲ ಲೋಕವನೆಲ್ಲಾ ಸಲಹುವಗೆ l

ಅಖಿಳ ಜೀವರೊಳಿದ್ದು ವ್ಯಾಪಾರ ಮಾಡುವ l

ಲಕುಮಿವಲ್ಲಭ ಸದಾ ಸುಖಪೂರ್ಣಗೆ ll 1 ll


ರಕ್ಕಸ ಹರಣಗೆ ರತಿಪತಿ ಜನಕಗೆ l

ಅಕ್ಕರದಿಂದಲಿ ಭಕುತರ ಪಾಲಗೆ l

ಮಕ್ಕಳಾಟಿಕೆಯಿಂದ ಮೋಹಿಪ ಜಗವನು l

ರುಕ್ಮಿಣಿಪತಿಯಾದ ರೂಪನಿಗೆ ll 2 ll


ವನಜಸಂಭವನೈಯ್ಯ ವಾಸಿಷ್ಠಋಷಿ ಕಾಯನೆನಿಸುವ l

ಗುಣಪೂರ್ಣ ಗೋವಿಂದಗೆ l

ಜನನಿಗಾಟವ ತೋರಿ ಜಯವಂತನಾಗಿಹ l

ಘನ ವೇಣುಗೋಪಾಲವಿಟ್ಠಲಯ್ಯಗೆ ll 3 ll

***


No comments:

Post a Comment