Tuesday, 13 April 2021

ಪಂಢರಪುರ ನಿಲಯ ಪಾಂಡುರಂಗ ಕಾಯೋ ankita hayavadana vittala

ಪಂಢರಪುರ ನಿಲಯ ಪಾಂಡುರಂಗ ಕಾಯೋ ll ಪ ll


ಭಕ್ತನ ಮೊರೆ ಕೇಳಿ ಸ್ವಪ್ನದಿ ಅಂಕಿತ ನೀಡಿ

ಶಕ್ತನ ಮಾಡಿದ್ಯೋ ನಿನ್ನ ಸೇವೆಗೆ ll 1 ll


ನಿತ್ಯದಿ ಮಾಡುವೆ ಸಾವಿರ ತಪ್ಪನು

ಸತ್ಯಸಂಕಲ್ಪ ನೀ ಕ್ಷಮಿಸಿ ಸಲಹೋ ll 2 ll


ಚಂದ್ರಭಾಗಾ ತೀರವಾಸ ಶ್ರೀಹಯವದನವಿಟ್ಠಲ

ಚಂದ್ರವಂಶಕುಲಲಲಾಮ ನೀ ಬಿಡದೆ ಕಾಯೋ ll 3 ll

***


No comments:

Post a Comment