Showing posts with label ಹರಿಯೇ ನೀನಲ್ಲದಾರ ಕಾಣೆ ಕಾಯ್ವರಮರೆ pranesha vittala. Show all posts
Showing posts with label ಹರಿಯೇ ನೀನಲ್ಲದಾರ ಕಾಣೆ ಕಾಯ್ವರಮರೆ pranesha vittala. Show all posts

Monday, 18 November 2019

ಹರಿಯೇ ನೀನಲ್ಲದಾರ ಕಾಣೆ ಕಾಯ್ವರಮರೆ ankita pranesha vittala

by ಪ್ರಾಣೇಶದಾಸರು
ಹರಿಯೇ ನೀನಲ್ಲದಾರ ಕಾಣೆ ಕಾಯ್ವರಮರೆ ಹೊಕ್ಕವರ ಭಯ ಪರಿಹಾರವನು ಮಾಡಿ ಪ

ಶಿವಭಕ್ತಾಗ್ರಣಿ ಬಾಹ್ರ್ಯದ್ರಥ ಗಂಜಾಲೆಮಜಾ ನಿ- |ನ್ನವನಿಂದಳಿಸಿದೆ, ಬಾಣನ ಬಾಗಿಲೂ ||ಭವಕಾಯ್ದಿರಲು ನೀ ತೋಳ್ಗಳನು ಛೇದಿಸುವಾಗ |ಲವಮಾತ್ರ ಪ್ರತಿಕೂಲನಾಗಲಿಲ್ಲ ಶಂಕರನು 1

ಹರಿಯೆಂದುದಕೆ ತಾಳದಲೆ ಬಾಧಿಸುತಲಿರೆ |ತರಳನ ಮೊರೆಕೇಳಿಕಂಭದಿಂದ ||ಉರಿಯುಗುಳುತ ಬಂದು ಖಳನುದರವ ಬಗೆದು |ಶರಣ ಪಾಲಕನೆಂಬ ಬಿರುದು ದಕ್ಕಿಸಿಕೊಂಡೆ 2

ಸ್ಥಾಣುವಿನವರಬಲದಿಂದಮರರ ಕಾಡೆ |ದಾನವಾನ್ವಯ ಕೊಂದೆ ಭಸ್ಮಾಸು- ||ರನು ಪಾಣಿಯ ತಲೆಯೊಳಿಡುವೆನೆಂಬೊ ಭರದಿ ಬರಲು |ಪ್ರಾಣೇಶ ವಿಠಲ ನೀ ಶಂಕರನನುಳುಹಿದಿ 3
******